ಮೈಕ್ರೋಸಾಫ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡ ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕೆ ಕಂಪ್ಯುಟರ್ ತರಬೇತಿ ನೀಡಲು ಉದ್ದೇಶಿಸಿದೆ. ಮುಂಡಗೋಡಿನ ಹಿಂದುಳಿದ ಪ್ರದೇಶದ ಪ್ರೌಢಶಾಲಾ ಮಕ್ಕಳ ಅನುಕೂಲಕ್ಕಾಗಿ ಕಂಪ್ಯುಟರ್ ತರಬೇತಿ ಕೇಂದ್ರ ಸ್ಥಾಪನೆಗೂ ನಿರ್ಧರಿಸಿದೆ.
ಸ್ಕೋಡ್ ವೆಸ್ ಸಂಸ್ಥೆ ಈಗಾಗಲೇ ಬೀಳೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಶುರು ಮಾಡಿದೆ. ಕೊಳಗೀಬೀಸ್ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಎ.ಐ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಲು ಸಿದ್ಧತೆ ನಡೆಸಿದೆ. `ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ಕಂಪ್ಯುಟರ್ ಜ್ಞಾನ ಅವಶ್ಯಕತೆಯಿರುವುದರಿಂದ ಡಿಜಿಟಲ್ ಸಾಕ್ಷರತೆಗೆ ಸ್ಕೋಡ್‌ವೆಸ್ ಉತ್ತೇಜನ ನೀಡಿದೆ’ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಅವರು ಹೇಳಿದ್ದಾರೆ.
ಈ ದಿನ ಜಿಲ್ಲೆಯ ಕೆಲವು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನೀಡಿದ ಕಂಪ್ಯುಟರ್’ನ್ನು ಸ್ಕೋಡ್‌ವೆಸ್ ಸಂಸ್ಥೆ ಪ್ರಮುಖರು ವಿತರಿಸಿದ್ದಾರೆ. ಸಂಸ್ಥೆಯ ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್ ರವಿ ಹಾಗೂ ಯೋಜನಾ ವಿಭಾಗದ ಮುಖ್ಯಸ್ಥ ವಿರೇಂದ್ರ ಸಿ ಅವರ ಮೂಲಕ ಕಂಪ್ಯುಟರ್’ಗಳು ಅರ್ಹ ವಿದ್ಯಾರ್ಥಿಗಳಿಗೆ ತಲುಪಿವೆ.