ಕಾರವಾರದ ಫೋಟೋಗ್ರಾಫರ್ ಸೂರಜ್ ಜೋಗಳೇಕರ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಸೂರಜ್ ಜೋಗಳೇಕರ್ ಅವರ ಮನೆಗೆ ನುಗ್ಗಿದ ಕಳ್ಳರು 65 ಸಾವಿರ ರೂ ಹಣ ಕದ್ದು ಪರಾರಿಯಾಗಿದ್ದಾರೆ.
ಕಾರವಾರದ ಕಾಜುಭಾಗದಲ್ಲಿರುವ ರಾಯಲ್ ಎಂಬಸಿ ಅಪಾರ್ಟಮೆಂಟಿನಲ್ಲಿ ಸೂರಜ್ ನಾರಾಯಣ ಜೋಗಳೇಕರ್ ಅವರು ವಾಸವಾಗಿದ್ದಾರೆ. ಫೋಟೋಗ್ರಾಫರ್ ಆಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಮಾರ್ಚ 28ರಂದು ರಾತ್ರಿ 10ಗಂಟೆ ನಂತರ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಏಪ್ರಿಲ್ 4ರ ಬೆಳಗ್ಗೆ ಅವರು ಅಪಾರ್ಟಮೆಂಟಿಗೆ ಬಂದು ನೋಡಿದಾಗ ಮನೆ ಬಾಗಿಲಿನ ಕೊಂಡಿ ಒಡೆದಿರುವುದು ಗೊತ್ತಾಗಿದೆ.
sÀಸೂರಜ್ ಜೋಗಳೇಕರ್ ಅವರು ಮನೆ ಒಳಗೆ ಹೋಗಿ ಪರಿಶೀಲನೆ ನಡೆಸಿದಾಗ ಟ್ರೀಜರಿಯಲ್ಲಿದ್ದ 65ಸಾವಿರ ಕಾಣಲಿಲ್ಲ. ಮನೆಯ ಎಲ್ಲಾ ಕಡೆ ಅವರು ಹುಡುಕಾಟ ನಡಸಿದರೂ ಆ ಹಣ ಸಿಗಲಿಲ್ಲ. ಅಕ್ಕಪಕ್ಕದ ಮನೆಯವರ ಬಳಿ ವಿಚಾರಿಸಿದರೂ ಕಳ್ಳತನ ಮಾಡಿದವರ ಸುಳಿವು ಸಿಕ್ಕಿಲ್ಲ. ಹೀಗಾಗಿ ಸೂರಜ್ ಜೋಗಳೇಕರ್ ಅವರು ಪೊಲೀಸರ ಮೊರೆ ಹೋಗಿದ್ದು, `ಕಳ್ಳರನ್ನು ಹುಡುಕಿ.. ಹಣ ಮರಳಿಸಿ’ ಎಂದು ಮನವಿ ಮಾಡಿದ್ದಾರೆ. ಕಾರವಾರ ಶಹರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರ ಶೋಧ ಶುರು ಮಾಡಿದ್ದಾರೆ.