ಒಂದೇ ಕಾರಿಗೆ ಎರಡು ನಂಬರ್ ಪ್ಲೇಟ್ ಸಿಕ್ಕಿಸಿಕೊಂಡ ದುರುಳರು ರಾತ್ರಿ ವೇಳೆ ಕಳ್ಳತನಕ್ಕೆ ಬರುತ್ತಿದ್ದು, ಭಟ್ಕಳದಲ್ಲಿ ಗೊವು ಕಳ್ಳತನಕ್ಕೆ ಯತ್ನಿಸಿದವರ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಜನ ಬರುವುದನ್ನು ನೋಡಿದ ದುಷ್ಕರ್ಮಿಗಳು ಕಾರಿನ ಜೊತೆ ಮೊಬೈಲನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಶನಿವಾರ ಭಟ್ಕಳದ ಜಾಲಿ ತಲಗೇರಿಯ ವಿವೇಕಾನಂದ ನಗರದಲ್ಲಿ ಹಸು ಕಳ್ಳತನ ಪ್ರಯತ್ನ ನಡೆದಿದೆ. ರಾತ್ರಿ ವೇಳೆ ಹಸು ಕೂಗುವುದನ್ನು ನೋಡಿದ ಜನ ಅಲ್ಲಿಗೆ ಜಮಾಯಿಸಿದ್ದು, ಜನರನ್ನು ನೋಡಿದ ದುರಳರು ಓಡಿ ತಪ್ಪಿಸಿಕೊಂಡಿದ್ದಾರೆ. ಕಾರಿನೊಳಗೆ ಸಿಕ್ಕಿಬಿದ್ದಿದ್ದ ಹಸುವನ್ನು ಜನ ಈ ವೇಳೆ ರಕ್ಷಿಸಿದ್ದಾರೆ.
ಬಿಳಿ ಬಣ್ಣದ ಸಿಪ್ಟ್ ಕಾರಿನಲ್ಲಿ ರಾತ್ರಿ 3.45ಕ್ಕೆ ದುಷ್ಕರ್ಮಿಗಳು ಹಸುವನ್ನು ತುಂಬಿಸಿದ್ದರು. ಮತ್ತೊಂದು ತಂಡವನ್ನು ಸ್ಥಳಕ್ಕೆ ಕರೆಯಿಸಿ ಆ ಗೋವನ್ನು ಅಪಹರಿಸುವ ಉಪಾಯ ಮಾಡಿದ್ದರು. ಜನ ಬರುವುದನ್ನು ನೋಡಿ ದುರುಳರು ಕರಿಕಲ್ ರಸ್ತೆಯ ಖಾಸಗಿ ಬ್ಯಾಂಕ್ ಹಿಂಭಾಗದಲ್ಲಿ ಅವಿತುಕೊಂಡಿದ್ದು, ಪೊಲೀಸರು ಅವರನ್ನು ಹಿಡಿಯುವ ಪ್ರಯತ್ನ ಮಾಡಿದರು. ಆದರೆ, ಅಲ್ಲಿಂದ ಅವರು ತಪ್ಪಿಸಿಕೊಂಡರು.
ಈ ವೇಳೆ ಎರಡು ನಂಬರ್ ಪ್ಲೇಟ್ ಹೊಂದಿದ ಕಾರಿನ ಜೊತೆ ಒಂದು ಬೈಕು ಸಹ ಸಿಕ್ಕಿದೆ. ಗೋ ಕಳ್ಳತನ ನಡೆಸುವುದಕ್ಕಾಗಿಯೇ ಕಾರಿಗೆ ಎರಡು ನಂಬರ್ ಪ್ಲೇಟ್ ಅಳವಡಿಸಿದ ಅನುಮಾನವ್ಯಕ್ತವಾಗಿದೆ. ಭಟ್ಕಳ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದು, ಆರೋಪಿತರ ಹುಡುಕಾಟ ನಡೆಸಿದ್ದಾರೆ.