ಚಾಕಲೇಟು ಖರೀದಿಗೆ ಅಂಗಡಿಗೆ ಹೋಗಿದ್ದ ಬಾಲಕಿಯನ್ನು ಹಿಂಬಾಲಿಸಿಕೊoಡು ಬಂದ ಹುಸೇನ್ ಆ ಬಾಲಕಿಯ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದು, ಹಳಿಯಾಳದ ಗುಂಡೊಳ್ಳಿ ಗ್ರಾಮದವರು ಸೇರಿ ಬಾಲಕಿಯನ್ನು ರಕ್ಷಿಸಿದ್ದಾರೆ. ಅದಾದ ನಂತರ ಆರೋಪಿ ಹುಸೇನ್’ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗುಂಡೊಳ್ಳಿ ಗ್ರಾಮದ 9 ವರ್ಷದ ಬಾಲಕಿಯೊಬ್ಬರು ಮೇ 1ರ ರಾತ್ರಿ ಅಂಗಡಿಗೆ ಹೋಗಿದ್ದರು. ಆ ಅಂಗಡಿಯಲ್ಲಿ ಸಾಮಗ್ರಿ ಖರೀದಿಸಿ ಮನೆಗೆ ಬರುವಾಗ ಅಲ್ಲಿಯೇ ಇದ್ದ ಹುಸೇನ್ (30) ಮಗುವನ್ನು ಹಿಂಬಾಲಿಸಿದರು. ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಬೇರೆಡೆ ಕರೆದುಕೊಂಡು ಹೋಗಿದ್ದು, ಊರಿನ ಜನ ಇದನ್ನು ನೋಡಿದರು. ಬಾಲಕಿ ಈ ವೇಳೆ ಜೋರಾಗಿ ಕೂಗಿದ್ದು, ಅತ್ಯಾಚಾರ ಪ್ರಯತ್ನ ನಡೆದಿರುವುದನ್ನು ಅರಿತ ಜನ ಸಂತ್ರಸ್ತೆಗೆ ಸಹಾಯ ಮಾಡಿದರು.
ಅಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕಿ ತಮಗಾದ ಅನ್ಯಾಯದ ಬಗ್ಗೆ ಮನೆಯಲ್ಲಿ ತಿಳಿಸಿದ್ದು, ಇನ್ನಷ್ಟು ಜನ ಸೇರಿ ಆರೋಪಿಯನ್ನು ಹಿಡಿದರು. ನಂತರ ಹಳಿಯಾಳ ಪೊಲೀಸ್ ಠಾಣೆಗೆ ಫೋನ್ ಮಾಡಿ ಪೊಲೀಸರನ್ನು ಕರೆಯಿಸಿದರು. ಪಿಸೈ ಕೃಷ್ಣಗೌಡ ಅರಕೇರಿ ಅವರು ಸಿಬ್ಬಂದಿ ಜೊತೆ ಆಗಮಿಸಿ ಆರೋಪಿಯನ್ನು ವಶಕ್ಕೆಪಡೆದರು. ಪಿಐ ಜಯಪಾಲ್ ಪಾಟೀಲ್ ಅವರು ಆರೋಪಿಯ ವಿಚಾರಣೆ ನಡೆಸಿದ್ದಾರೆ.