ತಮಗೆ ತಾವೇ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದ ಜೊಯಿಡಾದ ಡಿಗ್ಗಿಯ ಡಾ ಲೆನ್ಸರ್ ಲೋಬೋ ಅವರ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಅವರ ಸಾವಿನ ಸಮಗ್ರ ತನಿಖೆಗಾಗಿ ಕುಟುಂಬದವರು ಆಗ್ರಹಿಸಿದ್ದಾರೆ.
ಜೊಯಿಡಾ ತಾಲೂಕಿನ ಡಿಗ್ಗಿ ಆಸ್ಪತ್ರೆಯಲ್ಲಿ ಲೆನ್ಸರ್ ಲೋಬೊ ಅವರು ಕರ್ತವ್ಯದಲ್ಲಿದ್ದರು. ಜೋಯಿಡಾದ ಇಬ್ರಾಹಿಂ ಎಂಬಾತರ ಜೊತೆ ಅವರು ಸ್ನೇಹಹೊಂದಿದ್ದರು. ಏಪ್ರಿಲ್ 25 ಹಾಗೂ 26ರಂದು ಲೋಬೋ ಅವರು ಗೋವಾಗೆ ಹೋಗಿದ್ದರು. ಮರಳಿ ಬಂದಾಗ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಸ್ವಯಂ ಚಿಕಿತ್ಸೆ ಮಾಡಿಕೊಂಡಿದ್ದರು. ಅನಾರೋಗ್ಯದ ಅವಧಿಯಲ್ಲಿ ಅವರು ಊಟವನ್ನು ಮಾಡಿರಲಿಲ್ಲ.
ಏಪ್ರಿಲ್ 30ರಂದು ಅವರು ನಿತ್ರಾಣರಾಗಿದ್ದು, ತೀವೃ ಪ್ರಮಾಣದಲ್ಲಿ ಅಸ್ವಸ್ಥರಾದ ಲೆನ್ಸರ್ ಲೋಬೊ ಅವರನ್ನು ಅವರ ಪತ್ನಿ ಆಸ್ಪತ್ರೆಗೆ ದಾಖಲಿಸಿದ್ದರು. ಜೊಯಿಡಾ ಆಸ್ಪತ್ರೆ ವೈದ್ಯರು ಡಾ ಲೋಬೋ ಅವರು ಸಾವನಪ್ಪಿದ ವಿಷಯವನ್ನು ಘೋಷಿಸಿದರು. ಈ ಸಾವಿನಲ್ಲಿ ಲೋಬೋ ಅವರ ಪತ್ನಿಗೆ ಅನುಮಾನ ಕಾಡಿದ್ದು, ಅದರ ತನಿಖೆಗಾಗಿ ಕುಟುಂಬದವರು ಪೊಲೀಸರ ಮೊರೆ ಹೋಗಿದ್ದಾರೆ.
ಅತಿಯಾದ ಕುಡಿತ ಅಥವಾ ವಿಷ ಆಹಾರ ಸೇವನೆಯಿಂದ ಈ ಸಾವು ಸಂಭವಿಸಿದ ಬಗ್ಗೆ ಕುಟುಂಬದವರು ಅನುಮಾನವ್ಯಕ್ತಪಡಿಸಿದ್ದಾರೆ. ವೈದ್ಯರ ಜೊತೆ ಗೋವಾಗೆ ಹೋಗಿದ್ದ ಸ್ನೇಹಿತನ ಮೇಲೆ ಸಂಶಯವಿರುವುದಾಗಿಯೂ ಹೇಳಿದ್ದಾರೆ.