ಕಾರವಾರದ ಕೋಡಿಭಾಗದ ಬಳಿ ಫಾರ್ಚುನರ್ ಕಾರು ಬುಲೆರೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬುಲೆರೋ ಪಲ್ಟಿಯಾಗಿದೆ. ಉಜ್ವಲಲಕ್ಷ್ಮೀ ಭವನದ ಸಮೀಪ ಕಾರು ಅಪಘಾತಕ್ಕೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ.
ಬುಧವಾರ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಫಾರ್ಚುನರ್ ಕಾರು ಮುಂದಿದ್ದ ಬುಲೋರೋ ಹಿಂದಿಕ್ಕುವ ಪ್ರಯತ್ನ ಮಾಡಿತು. ಆ ವೇಳೆ ನಿಯಂತ್ರಣ ತಪ್ಪಿ ಆ ಕಾರು ಬುಲೇರೋಗೆ ಗುದ್ದಿತು. ಗುದ್ದಿದ ರಭಸಕ್ಕೆ ಬುಲೇರೋ ಅಲ್ಲಿಯೇ ಪಲ್ಟಿಯಾಯಿತು. ಬುಲೇರೋ ಒಳಗಿದ್ದ ಮೂವರು ಗಾಯಗೊಂಡರು. ಕುಮಟಾದಲ್ಲಿ ವಾಸವಾಗಿದ್ದ ಲಕ್ಷ್ಮಣಸಿಂಗ್ ಮಂಗುಸಿAಗ್ ರಾಥೋರ್ (31) ಅವರು ಫಾರ್ಚೂನರ್ ಕಾರನ್ನು ಚಿತ್ತಾಕುಲ ಕಡೆಯಿಂದ ಕಾರವಾರ ಕಡೆ ವೇಗವಾಗಿ ಓಡಿಸಿದ್ದು ಅಪಘಾತಕ್ಕೆ ಕಾರಣ.
ಬುಲೇರೋ ವಾಹನದ ಚಾಲಕ ಮೈಕಲ್ (57) ಹಾಗೂ ಆ ವಾಹನದಲ್ಲಿದ್ದ ಉತ್ತರ ಪ್ರದೇಶ ಮೂಲದ ಸುಶೀಲಕುಮಾರ ಜವಾಹರಲಾಲ್ (34) ಹಾಗೂ ನಿಪ್ಪಾಣಿಯ ಅಭಿಜೀತ್ ಸುರೇಶ್ ನಾಯ್ಕ (39) ಅವರಿಗೆ ಗಾಯವಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಇಂಜಿನಿಯರ್ ಆಗಿದ್ದಾರೆ. ಸ್ಥಳೀಯರು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬೊಲೆರೋ ಚಾಲಕ ಮೈಕಲ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.