ಸುಖ ನಿದ್ರೆ ಮಾತ್ರ ಬೇಕು ಎನ್ನುವ ನಾವು ಪ್ರತಿದಿನ ಬಳಸುವ ದಿಂಬಿನ ಕವರ್‌ಗಳನ್ನು ಎಷ್ಟು ಬಾರಿ ತೊಳೆಯಬೇಕು ಅಥವಾ ಬದಲಿಸಬೇಕು ಎನ್ನುವ ಬಗ್ಗೆ ಅಷ್ಟು ಗಮನ ಹರಿಸುವುದಿಲ್ಲ. ಆದರೆ ಇದು ಸ್ವಚ್ಛತೆಯ ಮತ್ತು ಆರೋಗ್ಯದ ದೃಷ್ಟಿಯಿಂದ ಇದು ಬಹಳ ಮುಖ್ಯವಾದ ವಿಷಯವಾಗಿದೆ.
ದಿನನಿತ್ಯ ದುಡಿಯುವ ನಮಗೆ ಒಂದೊಳ್ಳೆ ನಿದ್ದೆ ಇಲ್ಲವೆಂದರೆ ಹೇಗೆ. ನಿದ್ರೆ ಮಾನವನ ಜೀವನದ ಬಹು ಮುಖ್ಯ ಅಂಶ. ಉತ್ತಮ ನಿದ್ದೆ ನಮ್ಮ ಆರೋಗ್ಯವನ್ನು ಹೇಳುವುದಲ್ಲದೇ ನಾಳೆಯ ಕೆಲಸಕ್ಕೂ ಸಹಾಯಕಾರಿ. ನಿದ್ದೆ ಸರಿಯಾಗಿ ಆಗದಿದ್ದರೆ ಅದೇನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಆದರೆ ದಿಂಬಿನ ಕವರ್ ಬದಲಿಸುವ ಬಗ್ಗೆ ಮಾತ್ರೆ ಹೆಚ್ಚಿನವರು ಗಮನ ಹರಿಸುವುದಿಲ್ಲ.
ರಾತ್ರಿ ನಿದ್ದೆ ಮಾಡುವಾಗ ನಮ್ಮ ಚರ್ಮದಿಂದ ಹೊರಬರುವ ಬೆವರು, ಎಣ್ಣೆಯ ಅಂಶ, ಧೂಳು ಮತ್ತು ಚರ್ಮದ ಕಣಗಳು ದಿಂಬಿನ ಕವರ್‌ನಲ್ಲಿ ಸಂಗ್ರಹವಾಗುತ್ತವೆ. ಇದರಿಂದ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳು ಬೆಳೆಯಲು ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ತಜ್ಞರ ಪ್ರಕಾರ, ದಿಂಬಿನ ಕವರ್‌ಗಳನ್ನು ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ಬದಲಿಸುವುದು ಉತ್ತಮ. ವಿಶೇಷವಾಗಿ ಹೆಚ್ಚು ಬೆವರುವವರು, ಅಲರ್ಜಿ ಸಮಸ್ಯೆ ಇರುವವರು ಅಥವಾ ಮುಖದ ಮೊಡವೆಗಳಿಂದ ಬಳಲುವವರು ಕವರ್‌ಗಳನ್ನು ಇನ್ನಷ್ಟು ನಿಯಮಿತವಾಗಿ ತೊಳೆಯುವುದು ಸೂಕ್ತ.
ದೀರ್ಘಕಾಲ ಒಂದೇ ಕವರ್ ಬಳಸಿದರೆ ಚರ್ಮದ ಸಮಸ್ಯೆಗಳು, ಕಣ್ಣು ಮತ್ತು ಮೂಗಿನ ಅಲರ್ಜಿ, ಕೆರೆತ ಹಾಗೂ ನಿದ್ದೆಯ ಗುಣಮಟ್ಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಉತ್ತಮ ಆರೋಗ್ಯ ಮತ್ತು ಸ್ವಚ್ಛತೆಗಾಗಿ ದಿಂಬಿನ ಕವರ್‌ಗಳನ್ನು ಸಮಯಕ್ಕೆ ಸರಿಯಾಗಿ ಬದಲಿಸುವ ಅಭ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು. ಸಣ್ಣದಾಗಿ ಕಾಣುವ ಈ ಅಭ್ಯಾಸ ನಿಮ್ಮ ಆರೋಗ್ಯವನ್ನು ಕಾಪಾಡಲು ದೊಡ್ಡ ಪಾತ್ರ ವಹಿಸಬಹುದು.