ಹೊನ್ನಾವರದ ಏಳು ಬಾವಿಗಳಲ್ಲಿ ಪೆಟ್ರೊಲ್ ಸಿಗುತ್ತಿದೆ. ಪೆಟ್ರೊಲ್ ಜೊತೆ ಡಿಸೇಲ್ ಅಂಶವೂ ಬಾವಿಯಲ್ಲಿ ಪತ್ತೆಯಾಗಿದೆ. ಕುಡಿಯುವ ನೀರಿನ ಬಾವಿಯಲ್ಲಿ ಪೆಟ್ರೊಲ್-ಡಿಸೇಲ್ ವಾಸನೆ ನೋಡಿ ಜನ ಕಂಗಾಲಾಗಿದ್ದಾರೆ!
ADVERTISEMENT
ಹೊನ್ನಾವರ ಪಟ್ಟಣದ ತಹಶೀಲ್ದಾರ್ ಕಚೇರಿ ಸಮೀಪದ ಕೆಳಗಿನ ಪಾಳ್ಯದ ಪ್ರದೇಶದಲ್ಲಿರುವ ಬಾವಿಗಳು ಕಲುಷಿತಗೊಂಡಿದೆ. ಆ ಭಾಗದಲ್ಲಿರುವ `ಪ್ರಿಯದರ್ಶಿನಿ ಪೆಟ್ರೋಲ್ ಬಂಕಿನಿAದ ಇಂಧನ ಸೋರಿಕೆಯಾಗಿ ಬಾವಿಗೆ ಬರುತ್ತಿದೆ’ ಎಂಬುದು ಜನರ ದೂರು. ಪೆಟ್ರೊಲ್ ಮಿಶ್ರಿತ ನೀರನ್ನು ಬಾಟಲಿಯಲ್ಲಿ ತುಂಬಿದ ಜನ ಪೊಲೀಸ್ ಠಾಣೆಗೆ ಬಂದು ಕಾಣಿಸಿದ್ದಾರೆ. ತಮಗಾದ ಸಮಸ್ಯೆ ಬಗ್ಗೆ ಅವರು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ನೀರನ ಬಣ್ಣ ಸಂಪೂರ್ಣವಾಗಿ ಬದಲಾಗಿದ್ದು, ಅದು ಸೇವನೆಗೆ ಯೋಗ್ಯವಾಗಿಲ್ಲ ಎಂದವರು ಹೇಳಿದ್ದಾರೆ.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಕೆಲ ದಿನಗಳಿಂದ ಪೆಟ್ರೋಲ್ ಬಂಕಿನಲ್ಲಿ ನಿರ್ವಹಣಾ ಕೆಲಸ ನಡೆಯುತ್ತಿದೆ. ಅದರ ಪರಿಣಾಮ ಅಲ್ಲಿನ ಪೆಟ್ರೋಲ್ ಬಾವಿ ಸೇರುತ್ತಿದೆ. ಬಾವಿಯಲ್ಲಿ ಅಸಹಜ ಬದಲಾವಣೆ ನೋಡಿದ ಜನ ಕಾರಣ ಹುಡುಕಿದಾಗ ನಿರ್ವಹಣೆ ಕೆಲಸ ನಡೆಯುತ್ತಿರುವುದು ಗೊತ್ತಾಗಿದೆ. ನಿತ್ಯ ಬಳಕೆಯ ಜೊತೆ ಕುಡಿಯುವ ನೀರಿಗೂ ಅಲ್ಲಿನವರು ಬಾವಿ ನಂಬಿದ್ದು, ಪೆಟ್ರೋಲ್ ವಾಸನೆಯ ನೀರಿನಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. `ಪೆಟ್ರೊಲ್ ಬಂಕ್ ಮಾಲಕರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ. ಒಮ್ಮೆ ಮಾತ್ರ ಅವರು ಬಾವಿ ಸ್ವಚ್ಚ ಮಾಡಿಕೊಟ್ಟಿದ್ದು, ನಂತರ ಪೆಟ್ರೊಲ್ ಮಿಶ್ರಿತ ನೀರು ಬಂದರೂ ಜವಾಬ್ದಾರಿವಹಿಸಿಕೊಂಡಿಲ್ಲ’ ಎಂಬುದು ಅಲ್ಲಿನವರ ಅಳಲು.