ಭಟ್ಕಳ ಬೆಂಗ್ರೆ ಪಡುಶಿರಾಲಿಯ ಶಿವಾನಂದ ನಾಯ್ಕ ಅವರ ತಾರ್ ಕಾರನ್ನು ಹೊನ್ನಾವರ ಕನಸಗಿರಿಯ ದೇವೇಂದ್ರ ನಾಯ್ಕ ಅವರು ಅಪಹರಿಸಿದ್ದಾರೆ. ಆರು ತಿಂಗಳುಗಳ ಕಾಲ ಶಿವಾನಂದ ನಾಯ್ಕ ಅವರು ಇದೀಗ ದೇವೇಂದ್ರ ನಾಯ್ಕ ಅವರ ವಿರುದ್ಧ ಸಮರ ಸಾರಿದ್ದಾರೆ.
ಭಟ್ಕಳದ ಬೆಂಗ್ರೆ ಪಡುಶಿರಾಳಿಯಲ್ಲಿ ಶಿವಾನಂದ ನಾಗಪ್ಪ ನಾಯ್ಕ ಅವರು ವಾಸವಾಗಿದ್ದಾರೆ. 28 ವರ್ಷದ ಅವರು ವ್ಯಾಪಾರಿಯಾಗಿದ್ದು, ಅವರ ವ್ಯಾಪಾರಕ್ಕೆ ಅನುಕೂಲವಾಗುವ ಹಾಗೇ ತಾರ್ ಕಾರ್ ಖರೀದಿಗೆ ಯೋಚಿಸಿದ್ದಾರೆ. ತಮ್ಮ ಯೋಜನೆಯನ್ನು ಅವರು ಸಂಬoಧಿಯಾದ ಹೊನ್ನಾವರ ಕನಸಗಿರಿಯ ದೇವೇಂದ್ರ ಹೊನ್ನಪ್ಪ ನಾಯ್ಕ ಅವರಿಗೆ ಹೇಳಿದ್ದಾರೆ. ತಕ್ಷಣ ದೇವೇಂದ್ರ ನಾಯ್ಕ ಅವರು ಬೆಂಗಳೂರಿನಲ್ಲಿ ವಕೀಲರಾದ ಮೇಘಚಂದ್ರ ಡಿ ಎನ್ ಅವರ ಜೊತೆ ಮಾತನಾಡಿ ಶಿವಾನಂದ ನಾಯ್ಕ ಅವರಿಗೆ ತಾರ್ ಕಾರು ಕೊಡಿಸಿದ್ದಾರೆ.
14.60 ಲಕ್ಷ ರೂಪಾಯಿಗೆ ಶಿವಾನಂದ ನಾಯ್ಕ ಅವರು ಮಹೇಂದ್ರ ತಾರ್ ವಾಹನ ಖರೀದಿಸಿದ್ದಾರೆ. ಈ ವೇಳೆ ಶಿವಾನಂದ ನಾಯ್ಕ ಅವರಿಗೆ ಅವರ ಸ್ನೇಹಿತ ಸುಬ್ರಹ್ಮಣ್ಯ ಬಾಂದೇಕರ್ ಅವರು ಹಣಕಾಸಿನ ಸಹಾಯ ಮಾಡಿದ್ದಾರೆ. ಅದಾದ ನಂತರ ಶಿವಾನಂದ ನಾಯ್ಕ ಅವರು ಭಟ್ಕಳದ ಶ್ರೀರಾಮ ಫೈನಾನ್ಸಿನಲ್ಲಿ 12 ಲಕ್ಷ ರೂ ಸಾಲ ಮಾಡಿದ್ದು, ಆ ಹಣವನ್ನು ಸುಬ್ರಹ್ಮಣ್ಯ ಬಾಂದೇಕರ್ ಅವರಿಗೆ ನೀಡಿ ಕಾರಿನ ವ್ಯವಹಾರ ಮುಗಿಸಿದ್ದಾರೆ. ಶಿವಾನಂದ ನಾಯ್ಕ ಅವರ ಜೊತೆ ಅತ್ಯಂತ ಸಲುಗೆ ಬೆಳೆಸಿಕೊಂಡಿದ್ದ ದೇವೇಂದ್ರ ನಾಯ್ಕ ಅವರು ಆ ಕಾರು ಕೊಡಿಸಿದ್ದು ತಾನೂ ಎಂಬ ಅಧಿಕಾರದಲ್ಲಿ ಆಗಾಗ ಅದನ್ನು ಓಡಿಸುತ್ತಿದ್ದು, ಜನವರಿ 12ರಂದು ತೆಗೆದುಕೊಂಡು ಹೋದ ದೇವೇಂದ್ರ ನಾಯ್ಕ ಮತ್ತೆ ಆ ಕಾರನ್ನು ಮರಳಿಸಿಲ್ಲ.
ಕಾರು ಹೊಯಿತು. ಸಂಬAಧವೂ ಹಾಳಾಯಿತು ಎಂದು ಯೋಚಿಸಿದ ಶಿವಾನಂದ ನಾಯ್ಕ ಅವರು ಆ ಕಾರಿಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ದೇವೇಂದ್ರ ನಾಯ್ಕ ಅವರ ಬಳಿಯಿಂದ ಕಾರು ಪಡೆದು ನೀಡುವಂತೆ ಅವರು ಮನವಿ ಮಾಡಿದ್ದಾರೆ.