ಅoಕೋಲಾ-ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಯಲ್ಲಾಪುರದಲ್ಲಿ ಅಪಘಾತಕ್ಕೀಡಾಗಿದೆ. ಟ್ಯಾಂಕರಿನಿoದ ಗ್ಯಾಸ್ ಸೋರಿಕೆ ಆಗಿಲ್ಲ.
ಮಂಗಳೂರು ಕಡೆಯಿಂದ ಹೊರಟ ಗ್ಯಾಸ್ ಟ್ಯಾಂಕರಿನಲ್ಲಿ ಎಲ್ ಪಿ ಜಿ ಅಡುಗೆ ಅನಿಲ ತುಂಬಿತ್ತು. ಅಂಕೋಲಾ ದಾಟಿ ಯಲ್ಲಾಪುರ ಪ್ರವೇಶಿಸುವ ಮುನ್ನ ಆ ಟ್ಯಾಂಕರ್ ಆರತಿ ಬೈಲ್ ಘಟ್ಟ ಪ್ರದೇಶದಲ್ಲಿ ಪಲ್ಟಿಯಾಯಿತು. ಅಪಾಯದ ಬಗ್ಗೆ ಅರಿವಿದ್ದರೂ ಚಾಲಕ ಟ್ಯಾಂಕರನ್ನು ವೇಗವಾಗಿ ಚಲಿಸಿದ್ದು ಅವಘಡಕ್ಕೆ ಮುಖ್ಯ ಕಾರಣ.
ಟ್ಯಾಂಕರ್ ಬಿದ್ದ ಪರಿಣಾಮ ಆ ಭಾಗದ ಜನ ಆತಂಕಕ್ಕೆ ಒಳಗಾದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಜ್ಞರು ಟ್ಯಾಂಕರಿನಿAದ ಗ್ಯಾಸ್ ಸೋರಿಕೆ ಆಗದಿರುವುದನ್ನು ದೃಢಪಡಿಸಿದರು. ಗ್ಯಾಸ್ ಸೋರಿಕೆ ಆಗದ ಕಾರಣ ಜನ ನಿರಾಳರಾದರು. ಅದಾದ ನಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಂಚಾರ ದಟ್ಟಣೆ ನಿಯಂತ್ರಿಸುವ ಕೆಲಸ ಮಾಡಿದರು.
ಸದ್ಯ ಹೆದ್ದಾರಿ ಮೇಲೆ ಬಿದ್ದಿದ್ದ ಟ್ಯಾಂಕರನ್ನು ರಸ್ತೆ ಬದಿಗೆ ಸರಿಸಲಾಗಿದೆ. ಮತ್ತೊಂದು ಟ್ಯಾಂಕರ್ ಆಗಮಿಸಿದ ಮೇಲೆ ಈ ಟ್ಯಾಂಕರಿನ ಅನಿಲವನ್ನು ಅದಕ್ಕೆ ವರ್ಗಾಯಿಸಲಾಗುತ್ತದೆ.