2013ರಲ್ಲಿ ಕಾರವಾರದಲ್ಲಿದ್ದ ಸರ್ಕಾರಿ ಅಧಿಕಾರಿಯೊಬ್ಬರು 2023ರಲ್ಲಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಗದಗದಲ್ಲಿರುವ ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರರಾಗಿರ ಲಕ್ಷ್ಮೀನಾರಾಯಣ ಹೆಗಡೆ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.
2013ರಲ್ಲಿ ಲಕ್ಷ್ಮೀನಾರಾಯಣ ಹೆಗಡೆ ಅವರು ಕಾರವಾರದಲ್ಲಿ ವಾಸವಾಗಿದ್ದರು. ಆಗ, ಅವರು ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸರ್ಕಾರ ದಾಂಡೇಲಿಯಲ್ಲಿ ಕೆ ಎಚ್ ಬಿ ಕಾಲೋನಿ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಿದ್ದು, ಆ ಕೆಲಸವನ್ನು ಲಕ್ಷ್ಮೀನಾರಾಯಣ ಹೆಗಡೆ ಅವರು ನಿರ್ವಹಿಸಿದ್ದರು. 2013ರಲ್ಲಿ ದಾಂಡೇಲಿ ಅಂಬೇವಾಡಿಯ ಹೀನಾ ಮಹಮದ್ ಯುಸಪ್‌ಖಾನ್ ಅವರು ಒಂದು ಸೈಟನ್ನು ಪಡೆದಿದ್ದರು. ಸದ್ಯ ಅದೇ ಸೈಟನ್ನು 2023ರಲ್ಲಿ ದಸ್ತಾವೇಜು ತಿದ್ದುಪಡಿ ಮಾಡಲಾಗಿದ್ದು, ಈ ವೇಳೆ ತಮ್ಮ ಅಧಿಕಾರ ಮೀರಿ ವರ್ತಿಸಿದ ಲಕ್ಷ್ಮೀನಾರಾಯಣ ಹೆಗಡೆ ಅವರ ವಿರುದ್ಧ ಪೊಲೀಸ್ ಕೇಸು ದಾಖಲಾಗಿದೆ.
ಬೆಳಗಾವಿಯ ಹುಕ್ಕೇರಿಯಲ್ಲಿ ಪತ್ರಕರ್ತರಾಗಿರುವ ಬಸವರಾಜ ನಾಯ್ಕಮನೆ ಅವರು ಲಕ್ಷಿö್ಮÃನಾರಾಯಣ ಹೆಗಡೆ ಅವರು ಮಾಡಿದ ಅಪರಾತಪರಗಳ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ನಕಲಿ ದಾಖಲೆ ಸೃಷ್ಠಿಸಿ ಈ ದಸ್ತಾವೇಜು ಮಾಡಿರುವುದಾಗಿ ಅವರು ದೂರಿದ್ದಾರೆ. 2023ರಲ್ಲಿ ಕಾರವಾರದ ಕರ್ನಾಟಕ ಗೃಹ ಮಂಡಳಿಯಲ್ಲಿಲ್ಲದಿದ್ದರೂ ಲಕ್ಷ್ಮೀನಾರಾಯಣ ಹೆಗಡೆ ಅವರು ನಕಲಿ ದಾಖಲೆಗಳ ಜೊತೆ ದಸ್ತು ತಿದ್ದುಪಡಿ ಮಾಡಿದ್ದಾರೆ ಎಂದವರು ಆರೋಪಿಸಿದ್ದಾರೆ. ಸರ್ಕಾರಕ್ಕೆ ಮೋಸ ಮಾಡಿದ ಲಕ್ಷ್ಮೀನಾರಾಯಣ ಹೆಗಡೆ ಹಾಗೂ ಹೀನಾ ಮಹಮದ್ ಯುಸಪ್‌ಖಾನ್ ಅವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ಪೊಲೀಸ್ ದೂರು ನೀಡಿದ್ದಾರೆ.