ಮೀನುಗಾರಿಕೆ ನಡೆಸುವುದಕ್ಕಾಗಿ ಬಲೆಗಳ ಜೊತೆ ಸಮುದ್ರಕ್ಕೆ ಹೋಗಿದ್ದ ಲಿಂಗಾ ಹರಿಕಂತ್ರ ಅವರು ಅದೇ ಬಲೆಗಳ ನಡುವೆ ಸಿಲುಕಿ ಸಾವನಪ್ಪಿದ್ದಾರೆ. ಬಲೆಯಲ್ಲಿ ಕಾಲು ಸಿಕ್ಕಿ ಸಮುದ್ರಕ್ಕೆ ಬಿದ್ದ ಅವರಿಗೆ ಭಾರೀ ಗಾತ್ರದ ಅಲೆ ಅಪ್ಪಳಿಸಿದ್ದು, ಆಳ ಸಮುದ್ರದಲ್ಲಿ ಮುಳುಗಿ ಅವರು ಕೊನೆಯುಸಿರೆಳೆದಿದ್ದಾರೆ.
ಹೊನ್ನಾವರದ ಮಂಕಿ ಹೊಸಹಿತ್ಲದಲ್ಲಿ ಲಿಂಗಾ ಮಂಜು ಹರಿಕಂತ್ರ ಅವರು ವಾಸವಾಗಿದ್ದರು. 54 ವರ್ಷದ ಅವರು ಜುಲೈ 18ರ ಸಂಜೆ ಮೀನುಗಾರಿಕೆಗೆ ಹೋಗಿದ್ದರು. ಮನೆಯಲ್ಲಿದ್ದ ಏಳು ಬಲೆಗಳನ್ನು ಹಿಡಿದು ಅವರು ಮೀನು ಹಿಡಿಯಲು ಹೊರಟಿದ್ದು, ಮರುದಿನ ಬೆಳಗ್ಗೆ 3 ಗಂಟೆ ವೇಳೆಗೆ ಅವಘಡಕ್ಕೆ ಸಿಲುಕಿದರು. ಹೊಸಹಿತ್ಲದಿಂದ ಅರಬ್ಬಿ ಸಮುದ್ರಕ್ಕೆ ಹೋಗಿದ್ದ ಅವರು ಆಳ ಸಮುದ್ರದಲ್ಲಿ ನಡೆದ ದುರಂತದಲ್ಲಿ ತಮ್ಮ ಉಸಿರು ನಿಲ್ಲಿಸಿದರು.
ಜುಲೈ 19ರ ನಸುಕಿನ 3 ಗಂಟೆಗೆ ಲಿಂಗಾ ಹರಿಕಂತ್ರ ಅವರ ಬೀಸಿದ್ದ ಬಲೆಯೊಳಗೆ ಅವರ ಕಾಲು ಸಿಕ್ಕಿಬಿದ್ದಿತು. ಅದರಿಂದ ತಪ್ಪಿಸಿಕೊಳ್ಳುವದರೊಳಗೆ ದೊಡ್ಡ ಅಲೆಯೊಂದು ಅವರಿಗೆ ಬಡಿಯಿತು. ನೀರಿಗೆ ಬಿದ್ದ ಅವರಿಗೆ ಮೇಲೆ ಬರಲು ಸಾಧ್ಯವಾಗಲಿಲ್ಲ. ಬಲೆಯೊಳಗೆ ಸಿಕ್ಕಿಬಿದ್ದ ಕಾರಣ ಈಜಲು ಸಹ ಆಗಲಿಲ್ಲ. ಹೀಗಾಗಿ ಅವರು ಅಲ್ಲಿಯೇ ಸಾವನಪ್ಪಿದರು. ಅವರ ಸಂಬAಧಿಯೂ ಆಗಿರುವ ನಾಗೇಶ ಮಂಜಪ್ಪ ಹರಿಕಂತ್ರ (40) ಅವರು ಈ ವಿಷಯ ಪೊಲೀಸರಿಗೆ ಮುಟ್ಟಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
`ಕೆಲಸ ಮಾಡುವಾಗ ಮುನ್ನಚ್ಚರಿಕೆವಹಿಸಿ’