ಶರಾವತಿಯ ಶಿಂಗಳಿಕ ಕಣಿವೆ ಪ್ರದೇಶದೊಳಗೆ ಪ್ರವೇಶಿಸಿದ Facebook ಹಾಗೂ Instagram influencer ವಿರುದ್ಧ ಅರಣ್ಯಾಧಿಕಾರಿಗಳು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. `ಲೋಕಲ್ ಮಾಪ್ಸ್’ ಎಂಬ ಜಾಲತಾಣ ಪುಟದವರು ಅಪಾಯಕಾರಿ ಸ್ಥಳಕ್ಕೆ ಹೋದ ಕಾರಣ ಅವರ ವಿರುದ್ಧ ಕಾನೂನು ಕ್ರಮವಾಗಿದೆ.
ಈಚೆಗೆ `ಲೋಕಲ್ ಮಾಪ್ಸ್’ ತಂಡದವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ವಿಡಿಯೋ ಹರಿಬಿಡುತ್ತಿದ್ದಾರೆ. ಹಾಗೇ, ಜುಲೈ 23ರಂದು ಅವರು ಹೊನ್ನಾವರಕ್ಕೆ ಹೋಗಿದ್ದು, ಅಲ್ಲಿನ ಕಾಡುಗಳಲ್ಲಿ ಸಂಚಾರ ಮಾಡಿದ್ದಾರೆ. ಶರಾವತಿಯ ಶಿಂಗಳಿಕ ಕಣಿವೆ ಪ್ರದೇಶದೊಳಗೆ ಪ್ರವೇಶಿಸಿ ಅಲ್ಲಿನ `ಕನ್ನಿಕಾ ಜಲಪಾತ’ವನ್ನು ಚಿತ್ರಿಸಿದ್ದಾರೆ.
ಫೇಸ್ಬುಕ್’ಲಿ ಬಂದ ಈ ವಿಡಿಯೋವನ್ನು ಅರಣ್ಯಾಧಿಕಾರಿಗಳು ನೋಡಿದ್ದಾರೆ. ಅಪಾಯಕಾರಿಯಾದ ಸ್ಥಳಕ್ಕೆ ಹೋಗಿದಲ್ಲದೇ, ಅಲ್ಲಿನ ವಿಡಿಯೋ ಮಾಡಿ ಹರಿಬಿಟ್ಟಿದ್ದರಿಂದ ಇನ್ನಷ್ಟು ಜನ ಅಲ್ಲಿ ಬರುವ ಪ್ರಯತ್ನ ಮಾಡಿದ್ದಾರೆ. ಇದು ಅರಣ್ಯ ಇಲಾಖೆಯವರಿಗೆ ಸಮಸ್ಯೆಯಾಗಿದೆ. ಈ ಹಿನ್ನಲೆ ಗೇರುಸೊಪ್ಪ ಉಪವಲಯ ಅರಣ್ಯಾಧಿಕಾರಿ ಬಾಲಕೃಷ್ಣ ಈಶ್ವರ ನಾಯ್ಕ ಅವರು `ಲೋಕಲ್ ಮಾಪ್ಸ್’ ವಿರುದ್ಧ ದೂರು ನೀಡಿದ್ದಾರೆ. ಐದು ಜನ ಸೇರಿ ಅಲ್ಲಿ ಅಪಾಯಕಾರಿ ರೀತಿ ವಿಡಿಯೋ ಮಾಡಿದ ಬಗ್ಗೆ ಅವರು ದೂರಿದ್ದು, ಪೊಲೀಸರು ಕೇಸು ದಾಖಲಿಸಿ `ಲೋಕಲ್ ಮಾಪ್ಸ್’ ತಂಡದವರ ಹುಡುಕಾಟ ಶುರು ಮಾಡಿದ್ದಾರೆ.