ಕೈಯಲ್ಲಿ ಮಾರಕಾಸ್ತಹಿಡಿದು ಶಾಂತಿ-ಸುವ್ಯವಸ್ಥೆ ಹಾಳು ಮಾಡಿದ ಮೂವರ ವಿರುದ್ಧ ದಾಂಡೇಲಿ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಮಾರುತಿನಗರದ ಅಶೋಕ ಗುರವ್, ಪೈರೋಜ್ ದವಲತ್ತಿ ಹಾಗೂ ಆಸಿಪ್ ನರಗುಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ದಾAಡೇಲಿಯ ಜಿ ಎನ್ ರಸ್ತೆಯಲ್ಲಿ ಸೋಮವಾರ ಸಂಜೆ ಮಾರಾಮಾರಿ ಡನೆದಿದ್ದು, ಯುವಕನೊಬ್ಬನ ಮೇಲೆ ಮೂವರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಮೆಡ್ ಪ್ಲಸ್ ಮೆಡಿಕಲ್ ಬಳಿ ಸೋಮವಾರ ಸಂಜೆ ದಿಢೀರ್ ಆಗಿ ಗಲಾಟೆ ಶುರುವಾಗಿದ್ದರಿಂದ ಜನ ಆತಂಕಕ್ಕೆ ಒಳಗಾಗಿದ್ದರು. ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ ಮೂವರು ನಂತರ ಅಲ್ಲಿಂದ ಪರಾರಿಯಾಗಿದ್ದರು. ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು.
ದಾಳಿಗೆ ಒಳಗಾದ ವ್ಯಕ್ತಿಯೂ ಪೊಲೀಸರ ಸಹಾಯ ಯಾಚಿಸಿ ದೂರು ನೀಡಿದ್ದರು. ತನಿಖೆ ನಡೆಸಿದಾಗ ದಾಂಡೇಲಿ ಮಾರುತಿ ನಗರದ ಅಶೋಕ ದೇಮಣ್ಣ ಗುರವ್, ಪೈರೋಜ್ ಅಬ್ದುಲ್ ಸತ್ತಾರ್ ದವಲತ್ತಿ ಹಾಗೂ ಆಸಿಪ್ (ಅಕ್ಬರ್) ಫಕ್ರುದ್ಧಿನ್ ನರಗುಂದ ಅವರು ಸಿಕ್ಕಿಬಿದ್ದಿದ್ದಾರೆ. ಹನುಮಾನ ರಸ್ತೆ ಬಾರ್ ಎದುರು ಅವರೇ ಗಲಾಟೆ ಮಾಡಿದನ್ನು ಒಪ್ಪಿಕೊಂಡಿದ್ದು, ಎಲ್ಲರನ್ನು ಪೊಲೀಸರು ಬಂಧಿಸಿದ್ದಾರೆ.