ವಿಳಾಸ ಕೇಳುವುದಕ್ಕಾಗಿ ಮಾದೇವ ನಾಯ್ಕ ಅವರ ಸ್ಕೂಟಿಗೆ ಅಡ್ಡಲಾಗಿ ಕೈ ಮಾಡಿದ ವ್ಯಕ್ತಿಯೊಬ್ಬರು ಮಾದೇವ ನಾಯ್ಕ ಅವರ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿದ್ದಾರೆ. ಈ ವೇಳೆ ಮಾದೇವ ನಾಯ್ಕ ಅವರು ಜೋರು ಬೊಬ್ಬೆ ಹೊಡೆದಿದ್ದು, ಆ ಬೊಬ್ಬೆ ಕೇಳಿ ಅಲ್ಲಿಗೆ ಆಗಮಿಸಿದ ವಿಶ್ವ ದೇವಾಡಿಗ ಅವರಿಂದಲೂ ಚಿನ್ನದ ಸರ ಎಗರಿಸಿದವರನ್ನು ಹಿಡಿಯಲು ಸಾಧ್ಯವಾಗಿಲ್ಲ.
ಭಟ್ಕಳದ ಮುರುಡೇಶ್ವರ ಬೈಲೂರು ದೊಡ್ಡ ಬೆಳಸೆಯಲ್ಲಿ ಮಾದೇವ ನಾರಾಯಣ ನಾಯ್ಕ ಅವರು ವಾಸವಾಗಿದ್ದಾರೆ. 56 ವರ್ಷದ ಅವರು ಕಿರಾಣಿ ಅಂಗಡಿ ನಡೆಸಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಅವರು ಕಿರಾಣಿ ಅಂಗಡಿಗೆ ಹಾಜರಾಗುತ್ತಾರೆ. ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗಿ ಬರುವ ಅವರು ರಾತ್ರಿ 9.30ರವರೆಗೂ ಅಂಗಡಿ ನಡೆಸುತ್ತಾರೆ. ದಿನವಿಡೀ ದುಡಿದ ದುಡಿಮೆ ಹಣದಿಂದ ಅವರು ಒಂದು ಎಳೆಯ ಚಿನ್ನದ ಸರ ಮಾಡಿಸಿಕೊಂಡಿದ್ದು, ಅದನ್ನು ಮೈಮೇಲೆ ಹಾಕಿಕೊಂಡೇ ಓಡಾಡುತ್ತಾರೆ. ಇದನ್ನು ನೋಡಿದ ದುಷ್ಕರ್ಮಿಗಳಿಬ್ಬರು ಆ ಚಿನ್ನದ ಸರ ಎಗರಿಸಿದ್ದಾರೆ.
ಜೂನ್ 20ರ ರಾತ್ರಿ ಮಾದೇವ ನಾಯ್ಕ ಅವರು ಎಂದಿನAತೆ ತಮ್ಮ ಅಂಗಡಿಗೆ ಬೀಗ ಹಾಕಿದ್ದಾರೆ. ಅದಾದ ನಂತರ ಸ್ಕೂಟಿ ಮೇಲೆ ಅವರು ಮನೆ ಕಡೆ ಸಂಚರಿಸಿದ್ದು, ಬೆಲಸೆ ಕ್ರಾಸಿನ ಬಳಿ ಸ್ಕೂಟಿ ನಿಧಾನ ಮಾಡಿದ್ದಾರೆ. ದೊಡ್ಡ ಬೆಲಸೆ ಕ್ರಾಸಿನ ಬಳಿ ಹೋಗುವಾಗ ಅಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸ್ಕೂಟಿಗೆ ಅಡ್ಡಲಾಗಿ ಕೈ ಮಾಡಿದ್ದಾರೆ. ದಾರಿ ತಪ್ಪಿ ಬಂದಿರುವವರ ಬಗ್ಗೆ ಯೋಚಿಸಿದ ಮಾದೇವ ನಾಯ್ಕ ಅವರು ಸ್ಕೂಟಿ ನಿಲ್ಲಿಸಿದ್ದಾರೆ. ಆಗ, ಆ ಅಪರಿಚಿತ ವ್ಯಕ್ತಿ `ಬೆಲಸೆ ಭಟ್ಟರ ಮನೆಗೆ ಹೋಗುವ ದಾರಿ ಹೇಗೆ?’ ಎಂದು ಕೇಳಿದ್ದಾರೆ. ಅದಕ್ಕೆ ಮಾದೇವ ನಾಯ್ಕ ಅವರು `ಹೀಗೆ ಮುಂದೆ ಹೋಗಬೇಕು’ ಎಂದಿದ್ದಾರೆ. ಅದಾದ ನಂತರ ಆ ಅಪರಿಚಿತ `ಜೇಬಿನಲ್ಲಿ ಎಷ್ಟು ದುಡ್ಡು ಇಟ್ಟಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ. `ದುಡ್ಡು ಏಕೆ?’ ಎಂದು ಮಾದೇವ ನಾಯ್ಕ ಅವರು ಪ್ರಶ್ನಿಸುವಾಗಲೇ ಆ ಅಪರಿಚಿತನ ಕೈ ಕೊರಳ ಬಳಿ ಹೋಗಿದೆ.
ಕೊರಳಿನಲ್ಲಿದ್ದ ಚಿನ್ನದ ಸರ ಎಗರಿಸಿದ ಆ ಅಪರಿಚಿತ ಅಲ್ಲಿಯೇ ಅನತಿ ದೂರದಲ್ಲಿ ನಿಂತಿದ್ದ ಬೈಕ್ ಏರಿ ಪರಾರಿಯಾಗಿದ್ದಾರೆ. ಆ ಬೈಕು ಮಂಕಿ ಕಡೆ ಹೋಗಿದನ್ನು ಮಾದೇವ ನಾಯ್ಕ ಅವರು ನೋಡಿದ್ದಾರೆ. ಅದಾದ ನಂತರ ಮಾದೇವ ನಾಯ್ಕ ಅವರು ಜೋರಾಗಿ ಕೂಗಿಕೊಂಡಿದ್ದು, ವಿಶ್ವ ದೇವಾಡಿಗ ಅವರು ಅಲ್ಲಿಗೆ ಬಂದಿದ್ದಾರೆ. ನಡೆದ ವಿಷಯ ತಿಳಿದ ವಿಶ್ವ ದೇವಾಡಿಗ ಅವರು ಕಳ್ಳರನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಆದರೆ, ಅದು ಸಾಧ್ಯವಾಗಿಲ್ಲ. 1 ಲಕ್ಷ ರೂ ಮೌಲ್ಯದ ಚಿನ್ನದ ಸರ ಕಳೆದುಕೊಂಡ ಕಿರಾಣಿ ಅಂಗಡಿ ಮಾಲಕ ಮಾದೇವ ದೇವಾಡಿಗ ಅವರು ತಮಗಾದ ಅನ್ಯಾಯದ ಬಗ್ಗೆ ಪೊಲೀಸರಲ್ಲಿ ಹೇಳಿದ್ದಾರೆ. ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ವಿಷಯ ಕೇಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
`ಅಪರಿಚಿತರ ಬಗ್ಗೆ ಎಚ್ಚರಿಕೆವಹಿಸಿ’