ಭಟ್ಕಳದಲ್ಲಿರುವ ವಿಜ್ ಮೋನಿ ಫೈನಾನ್ಸಿನವರು ನಕಲಿ ಬಂಗಾರಕ್ಕೂ ಲಕ್ಷಾಂತರ ರೂ ಸಾಲ ಕೊಟ್ಟಿದ್ದಾರೆ. ಅದಾದ ನಂತರ ಅವರ ಬಳಿಯಿರುವ ಬಂಗಾರ ನಕಲಿ ಎಂದು ಗೊತ್ತಾಗಿದ್ದು, ಹಣ ವಸೂಲಿಗಾಗಿ ಸಾಲಪಡೆದವರನ್ನು ಹುಡುಕಿ ಹೊರಟಿದ್ದಾರೆ.
ಭಟ್ಕಳದ ಮುಖ್ಯ ರಸ್ತೆಯಲ್ಲಿ ವಿಜ್ ಮೋನಿ ಫೈನಾನ್ಸ್ ಕಚೇರಿಯಿದೆ. ಅಲ್ಲಿ ಭಟ್ಕಳ ಹೆಬ್ಸಿ ಬಳಿಯ ತಲಗೋಡಿನ ಪ್ರಶಾಂತ ಮಾಧವ ನಾಯ್ಕ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಅಗತ್ಯವಿದ್ದವರಿಂದ ವಿವಿಧ ದಾಖಲೆ-ಆಸ್ತಿಪಡೆದು ಅಗತ್ಯಕ್ಕೆ ಅನುಗುಣವಾಗಿ ಸಾಲ ಕೊಡುವುದು ಅವರ ಕೆಲಸ. ಪ್ರಶಾಂತ ನಾಯ್ಕ ಅವರ ನ್ಯೂನ್ಯತೆಗಳ ಬಗ್ಗೆ ಅರಿತ ಸಿದ್ರಿಕ್ ಸ್ಟಿಟ್’ಮ ಬೇಬಿ ಸಬೀನಾ ಸೀರಾಜ್ ತಾರ್ ಅವರು ಫೈನಾನ್ಸ್ ಕಂಪನಿಗೆ ಮೋಸ ಮಾಡಲು ಉದ್ದೇಶಿಸಿದ್ದಾರೆ. ತಾವು ನಿರ್ಧರಿಸಿದಂತೆಯೇ ಅವರು ಮತ್ತೆ ಮೂವರ ಜೊತೆ ಸೇರಿ 2.5 ಲಕ್ಷ ರೂ ಯಾಮಾರಿಸಿದ್ದಾರೆ.
ಫೆಬ್ರವರಿ 6ರಂದು ಭಟ್ಕಳ ಮೇನ್ ರೋಡಿನಲ್ಲಿರುವ ವಿಜ್ ಮೋನಿ ಫೈನಾನ್ಸ್ ಶಾಖೆಗೆ ಬೇಬಿ ಸಬೀನಾ ಅವರು ಭೇಟಿ ನೀಡಿದ್ದಾರೆ. ಉಡುಪಿಯ ಮಹಮದ್ ಜುಬೇರ್, ಕುಂದಾಪುರ ನಾವುಂದದ ಅಬ್ಬಾಸ್ ಸಾಬ್ ಹಾಗೂ ಕುಂದಾಪುರದ ಹರೀಶಿ ಅವರನ್ನು ಬೇಬಿ ಸಬೀನಾ ಅವರು ಆ ಕಚೇರಿಗೆ ಕರೆತಂದಿದ್ದಾರೆ. ಆ ನಾಲ್ವರು ಸೇರಿ ಪ್ರಶಾಂತ ನಾಯ್ಕ ಅವರನ್ನು ಮಾತನಾಡಿಸಿದ್ದಾರೆ. `ನಮಗೆ ಚಿನ್ನದ ಮೇಲೆ ಸಾಲ ಬೇಕು’ ಎಂದು ಹೇಳಿ ಚಿನ್ನವನ್ನು ತೋರಿಸಿದ್ದಾರೆ. ಅದಾದ ನಂತರ ಅಲ್ಲಿ ಸಾಲಕ್ಕಾಗಿ ಖಾತೆಗಳನ್ನು ತೆರೆದಿದ್ದಾರೆ. ಚಿನ್ನವನ್ನು ಅಡವಿರಿಸಿ 2.5 ಲಕ್ಷ ರೂ ಸಾಲಪಡೆದಿದ್ದಾರೆ.
ಅದಾಗಿ ಕೆಲ ದಿನದ ನಂತರ ಪ್ರಶಾಂತ ನಾಯ್ಕ ಅವರಿಗೆ ಆ ಚಿನ್ನದ ಮೇಲೆ ಅನುಮಾನ ಬಂದಿದೆ. ಪರೀಕ್ಷಿಸಿದಾಗ ಅದೆಲ್ಲವೂ ನಕಲಿ ಚಿನ್ನ ಎಂದು ಗೊತ್ತಾಗಿದೆ. ಕೂಡಲೇ ಬೇಬಿ ಸಬೀನಾ ಅವರಿಗೆ ಪ್ರಶಾಂತ ನಾಯ್ಕ ಅವರು ಫೋನ್ ಮಾಡಿದ್ದಾರೆ. ನಕಲಿ ಚಿನ್ನ ಅಡವಿರಿಸಿದ ಬಗ್ಗೆ ಪ್ರಶ್ನಿಸಿದ್ದಾರೆ. ಕೂಡಲೇ ಸಾಲದ ಹಣ ಮರಳಿಸುವಂತೆ ಸೂಚಿಸಿದ್ದಾರೆ. `ಇಂದು ಕೊಡುವೆ. ನಾಳೆ ಕೊಡುವೆ’ ಎನ್ನುತ್ತಲೇ ಬೇಬಿ ಸಬೀನಾ ಅವರು ಕಾಲಹರಣ ಮಾಡಿದ್ದು, ಇದರಿಂದ ಸಿಟ್ಟಾದ ಪ್ರಶಾಂತ ನಾಯ್ಕ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
`ಮೋಸ ಮಾಡಬೇಡಿ | ಮೋಸ ಹೋಗಬೇಡಿ’