ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ ಅವರು ಶಾಸಕರಾದ ನಂತರ 500ಕೋಟಿಗೂ ಅಧಿಕ ಅನುದಾನ ತಂದು ಅಭಿವೃದ್ಧಿ ಮಾಡಿದ್ದು, ಅನಂತಮೂರ್ತಿ ಹೆಗಡೆ ಅವರು ತಮ್ಮೊಂದಿಗೆ ಬಂದರೆ ಆ ಎಲ್ಲಾ ಅಭಿವೃದ್ಧಿ ಕೆಲಸ ಕಾಣಿಸುವುದಾಗಿ ಭೀಮಣ್ಣ ನಾಯ್ಕ ಅಭಿಮಾನಿ ಬಳಗದವರು ಹೇಳಿದ್ದಾರೆ. ಶಾಸಕ ಭೀಮಣ್ಣ ನಾಯ್ಕ ಅವರಿಗೆ ಟೀಕಿಸುವ ಬದಲು ಅವರ ಜೊತೆ ಕೈ ಜೋಡಿಸಿ’ ಎಂದು ಮನವಿ ಮಾಡಿದ್ದಾರೆ.
ಅದಾದ ನಂತರ ಸಿಟ್ಟಿಗೆದ್ದ ಭೀಮಣ್ಣ ಬೆಂಬಲಿಗರು ಅನಂತಮೂರ್ತಿ ಹೆಗಡೆ ಅವರನ್ನು `ಅನಾಥಮೂರ್ತಿ-ಪ್ರಚಾರಮೂರ್ತಿ’ ಎಂಬ ಪದ ಬಳಸಿಯೂ ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಜೊತೆಗೆ `ಅನಂತಮೂರ್ತಿ ಹೆಗಡೆ ಅವರು ಬಿಜೆಪಿಗೆ ದುಡ್ಡು ಕೊಟ್ಟು ಹುದ್ದೆಪಡೆದಿದ್ದಾರೆ. ಇದೀಗ ಆ ಪಕ್ಷದ ರೈತ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಆದರೆ, ಆ ಹುದ್ದೆಯ ಮಹತ್ವ ಅವರಿಗೆ ಗೊತ್ತಿಲ್ಲ’ ಎಂದು ಸಹ ಆರೋಪಿಸಿದ್ದಾರೆ. `ಅತಿವೃಷ್ಟಿ-ಅನಾವೃಷ್ಟಿಯಿಂದ ರೈತರಿಗೆ ಆದ ಸಮಸ್ಯೆ ಬಗ್ಗೆ ಅನಂತಮೂರ್ತಿ ಹೆಗಡೆ ಅವರು ಮಾತನಾಡುತ್ತಿಲ್ಲ. ಅನಂತಮೂರ್ತಿ ಹೆಗಡೆ ಅವರಿಗೆ ಆಡಳಿತ ವ್ಯವಸ್ಥೆಯ ಬಗ್ಗೆ ಮಾಹಿತಿ ಇಲ್ಲ’ ಎಂದು ಭೀಮಣ್ಣ ನಾಯ್ಕ ಅವರ ಅಭಿಮಾನಿ ಮಧುಕೇಶ್ವರ ನಾಯ್ಕ ಅವರು ಹೇಳಿದ್ದಾರೆ. `ಭೀಮಣ್ಣ ನಾಯ್ಕ ಅವರ ಕೆಲಸವನ್ನು ಬಿಜೆಪಿಗರು ಹೊಗಳುತ್ತಿದ್ದರೂ ಅನಂತಮೂರ್ತಿ ಹೆಗಡೆ ಅದನ್ನು ಒಪ್ಪುತ್ತಿಲ್ಲ. ಫೋಟೋ-ಪ್ರಚಾರಕ್ಕಾಗಿ ಮಾತನಾಡುವ ಬದಲು ಮಾಡಿದ ಕೆಲಸ ಗಮನಿಸಿ’ ಎಂದು ಮನವಿ ಮಾಡಿದ್ದಾರೆ. `ಶಾಸಕರನ್ನು ಟೀಕಿಸುವ ಬದಲು ಅವರ ಜೊತೆ ಕೈ ಜೋಡಿಸಿ’ ಎಂದು ಮತ್ತೊಮ್ಮೆ ಹೇಳಿದ್ದಾರೆ.
`ಅನಂತಮೂರ್ತಿ ಹೆಗಡೆ ಅವರು ತಮ್ಮ ಸ್ವಾರ್ಥಕ್ಕಾಗಿ ಚ್ಯಾರಿಟೇಬಲ್ ಟ್ರಸ್ಟ್ ಮಾಡಿಕೊಂಡಿದ್ದಾರೆ. ಮೊನ್ನೆ ಮೊನ್ನೆ ಬಂದು ಹೋರಾಟ ಸಮಿತಿ ಮಾಡಿದ್ದಾರೆ. ಆ ಸಮಿತಿಯವರು ಈಗ ಕಾಣುತ್ತಿಲ್ಲ. ಸಾವು ಸಂಭವಿಸಿದ ಮನೆಗೆ ಹೋಗಿ ಸಾಂತ್ವಾನ ಹೇಳುವ ಬದಲು ಅವರನ್ನು ಪ್ರಚಾರಕ್ಕೆ ಬಳಸಿದಕ್ಕೆ ನಾಚಿಕೆ, ಮಾನ-ಮರ್ಯಾದಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. `ಸಂಸ್ಕಾರವoತರಾಗಿ ಮಾತನಾಡಿ’ ಎಂದು ಮಧುಕೇಶ್ವರ ನಾಯ್ಕ ಅವರು ಮನವಿ ಮಾಡಿದ್ದಾರೆ. `ಭೀಮಣ್ಣ ನಾಯ್ಕ ಅವರ ಅವಧಿಯಲ್ಲಿ ಹಳ್ಳಿ ಹಳ್ಳಿಗೂ ಉತ್ತಮ ರಸ್ತೆಯಾಗಿದೆ. ಅವರಿಗೆ ಜಿಲ್ಲೆಯ ಎಲ್ಲಡೆ ಅಭಿಮಾನಿ ಬಳಗವಿದೆ. ಅನಂತಮೂರ್ತಿ ಹೆಗಡೆ ಅವರು ಹಳ್ಳಿ-ಹಳ್ಳಿ ಓಡಾಡಿ ಪರಿಸ್ಥಿತಿ ಅರಿಯಬೇಕು. ಟೀಕೆ ಮಾಡುವುದು ಬೇಡ ಎನ್ನುವುದಿಲ್ಲ. ಆದರೆ, ನಿಮ್ಮ ತಿಳುವಳಿಕೆ ಮಟ್ಟಕ್ಕೆ ಮಾತನಾಡಬೇಡಿ’ ಎಂದು ಅವರು ಹೇಳಿದ್ದಾರೆ.
`ಅನಂತಮೂರ್ತಿ ಹೆಗಡೆ ಅವರಿಗೆ ಭೀಮಣ್ಣ ನಾಯ್ಕ ಅವರ ಸಂಪೂರ್ಣ ಪರಿಚಯ ಇಲ್ಲ. ಅವರ ಬಗ್ಗೆ ಅರಿತು ಮಾತನಾಡಬೇಕು’ ಎಂದು ಹೇಳಿದ್ದು, `ಅನಂತಮೂರ್ತಿ ಹೆಗಡೆ ಅವರು ತಪ್ಪು ತಿದ್ದುಕೊಳ್ಳದೇ ಇದ್ದರೆ ನಮಗೂ ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದರು. ಅಭಿಮಾನಿ ಬಳಗದ ರಾಘವೇಂದ್ರ ನಾಯ್ಕ, ರವಿ ನಾಯ್ಕ ಕಲಕರಡಿ, ಜಗದೀಶ ನಾಯ್ಕ, ಅಶೋಕ ಗುಡ್ನಾಪುರ, ಲೋಕೇಶ ನಾಯ್ಕ, ಮಧುಕರ ನಾಯ್ಕ, ಅಣ್ಣಪ್ಪ ನಾಯ್ಕ, ರಮಾಕಾಂತ ನಾಯ್ಕ, ಭದ್ರಗೌಡ, ಗಣಪತಿ ಬಾಶಿ, ಮಂಜುನಾಥ ನಾಯ್ಕ ಇದ್ದರು.