ಹಾವೇರಿಯಿಂದ ಶಿರಸಿಗೆ ಬಂದು ಗಾಂಜಾ ಮಾರುತ್ತಿದ್ದ ಸೈಯದ್ ಸಾದಿಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಬಳಿಯಿದ್ದ ಗಾಂಜಾ ಜೊತೆ ಬೈಕನ್ನು ಜಪ್ತು ಮಾಡಿದ್ದಾರೆ.
ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನ ಸೈಯದ್ ಸಾದಿಕ್ ತಂದೆ ಮುಜೀಬು (27) ಅವರು ಸಿಕ್ಕಿ ಬಿದ್ದಿದ್ದಾರೆ. ಜುಲೈ 8ರ ರಾತ್ರಿ ಶಿರಸಿ-ಯಲ್ಲಾಪುರ ರಸ್ತೆಯ ಅರಣ್ಯ ನೌಕರರ ಸಮುದಾಯ ಭವನದ ಬಳಿ ಗಾಂಜಾ ಮಾರುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಲೆ 272 ಗ್ರಾಂ ಗಾಂಜಾ ಸಿಕ್ಕಿದ್ದು, ಗಾಂಜಾ ಸಾಗಾಟಕ್ಕೆ ಬಳಸಿದ್ದ ಪಲ್ಸರ್ ಬೈಕನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಸಂಪತ್‌ಕುಮಾರ್ ಸಿ ಅವರ ಸೂಚನೆ ಮೇರೆಗೆ ಪಿಸೈ ಬಸವರಾಜ್ ಕರಶೆಟ್ಟಿ ಮತ್ತು ಗೀತಾ ಜಿ ಕಲಘಟಗಿ ಅವರು ಈ ಕಾರ್ಯಾಚರಣೆ ಮಾಡಿದ್ದಾರೆ. ಅಪರಾಧ ವಿಭಾಗದ ಸಿಬ್ಬಂದಿ ಕೋಟೇಶ್ ನಾಗರೊಳ್ಳಿ, ಸಂದೀಪ್ ನಿಂಬಾಳ್ಕರ್, ರಾಕೇಶ್ ಎನ್ ಎಚ್ ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.