ಬಾಗಲಕೋಟೆಯ ಸಂಗೀತಾ ಲಮಾಣಿ ಅವರು ಭಟ್ಕಳದ ಮಸ್ತಾಕ್ ಅವರನ್ನು ಪ್ರೀತಿಸಿದ್ದು, ಊರು ಬಿಟ್ಟು ಓಡಿ ಬಂದಿದ್ದಾರೆ. ಸಂಗೀತಾ ಲಮಾಣಿ ಅವರ ಮನವೊಲೈಸಲು ಬಂದವರಿಗೆ ಮಸ್ತಾಕ್ ಅವರ ಜೊತೆ ಮಹಮದ್ ಸಾಧಿಕ್ ಸೇರಿ ಹೊಡೆದಿದ್ದಾರೆ.
ಬಾಗಲಕೋಟೆಯ ಜಾನಮಟ್ಟಿ ತಾಂಡಾದ ಬಳಿ ರಮೇಶ ಲಮಾಣಿ ಅವರು ವಾಸವಾಗಿದ್ದಾರೆ. ಅವರ ಪುತ್ರಿ ಸಂಗೀತಾ ಲಮಾಣಿ ಅವರು ಭಟ್ಕಳದ ಗುಳ್ಮೆ ಬಳಲಖಂಡದಲ್ಲಿರುವ ಮಸ್ತಾಕ್ ಅವರ ಮೋಹಕ್ಕೆ ಬಿದ್ದಿದ್ದಾರೆ. ಹೀಗಾಗಿ ಮಸ್ತಾಕ್ ಅವರು ಸಂಗೀತಾ ಅವರನ್ನು ಅವರ ಊರಿನಿಂದ ಓಡಿಸಿಕೊಂಡು ಬಂದಿದ್ದಾರೆ. ಈ ವಿಷಯ ಅರಿತ ರಮೇಶ ಲಮಾಣಿ ಅವರ ಮಾವ ಕೃಷ್ಣಪ್ಪ ಲಮಾಣಿ ಅವರು ಭಟ್ಕಳಕ್ಕೆ ಆಗಮಿಸಿ, ಸಂಗೀತಾ ಲಮಾಣಿ ಅವರ ಮನವೊಲೈಸುವ ಪ್ರಯತ್ನ ಮಾಡಿದ್ದಾರೆ.
ಆದರೆ, ಈ ವೇಳೆ ಮಸ್ತಾಕ್ ಅವರ ಜೊತೆ ಮಹಮದ್ ಸಿದ್ದೀಕ್ ಸತ್ತಾರ್ ಅವರು ಸೇರಿ ಕೃಷ್ಣಪ್ಪ ಲಮಾಣಿ ಅವರನ್ನು ಬೆದರಿಸಿದ್ದಾರೆ. ಕೃಷ್ಣಪ್ಪ ಲಮಾಣಿ ಅವರ ಜೊತೆಗೆ ಬಂದಿದ್ದ ಗುತ್ತಿಗೆದಾರ ಪುಂಡಲಿಕ ಪವಾರ ಅವಗೂ ಅವರಿಬ್ಬರು ಸೇರಿ ಹೊಡೆದಿದ್ದಾರೆ. ಅವರ ಬಟ್ಟೆಗಳನ್ನು ಹರಿದು ಅವಮಾನ ಮಾಡಿದ್ದಾರೆ. `ಮತ್ತೆ ಹುಡುಗಿ ಕೇಳಲು ಬಂದರೆ ಅವಳನ್ನು ಉಳಿಸುವುದಿಲ್ಲ. ನಿಮ್ಮನ್ನು ಬಿಡುವುದಿಲ್ಲ’ ಎಂದು ಮಸ್ತಾಕ್ ಹಾಗೂ ಮಹಮದ್ ಸಿದ್ದೀಕ್ ಸತ್ತಾರ್ ಸೇರಿ ಕೃಷ್ಣಪ್ಪ ಲಮಾಣಿ ಹಾಗೂ ಪುಂಡಲಿಕ ಪವಾರ್ ಅವರನ್ನು ಬೆದರಿಸಿದ್ದಾರೆ.
ಅಗಸ್ಟ 8ರಂದು ಈ ಎಲ್ಲಾ ಘಟನೆ ನಡೆದಿದ್ದು, ತಮ್ಮ ಮೇಲಾದ ದಾಳಿ ಬಗ್ಗೆ ಕೃಷ್ಣಪ್ಪ ಲಮಾಣಿ ಅವರು ಪೊಲೀಸರಿಗೆ ದೂರಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.