ಮಾದಕ ವ್ಯಸನ ಸೇವಿಸಿ ಬಸ್ ನಿಲ್ದಾಣದ ಬಳಿ ಬಿದ್ದಿದ್ದ ಜೊಯಿಡಾದ ಗ್ರಾಮ ಒನ್ ಸಿಬ್ಬಂದಿ ಜೀಶನ್ ಬಷೀರ್ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆಪಡೆದ ಪೊಲೀಸರು ನಶೆ ಇಳಿಸಿ ಮನೆಗೆ ಕಳುಹಿಸಿದ್ದಾರೆ.
ADVERTISEMENT
ಜೊಯಿಡಾದ ಜನತಾ ಕಾಲೋನಿಯಲಿ ಜೀಶನ್ ಬಷೀರ್ ಕೋಲಾರ ಅವರು ವಾಸವಾಗಿದ್ದಾರೆ. 25ವರ್ಷದ ಅವರು ಜೊಯಿಡಾ ಗ್ರಾಮ ಪಂಚಾಯತದ ಗ್ರಾಮ ಒನ್ ಕೇಂದ್ರದಲ್ಲಿ ಕಂಪ್ಯುಟರ್ ಆಪರೇಟರ್ ಆಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಮಾದಕ ವ್ಯಸನದ ಹಾದಿ ಹಿಡಿದ ಅವರು ನಶೆಯ ಗುಂಗಿನಲ್ಲಿರುವಾಗ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ.
ADVERTISEMENT
ಜೊಯಿಡಾ – ಹುಡುಸಾ ರಸ್ತೆಯ ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ ಶೆಡ್ಡಿನಲ್ಲಿ ನಶೆಯ ಗುಂಗಿನಲ್ಲಿದ್ದ ಜೀಶನ್ ಬಷೀರ್ ಕೋಲಾರ ಅವರನ್ನು ಜೊಯಿಡಾ ಪಿಸೈ ಜಗದೀಶ ಅವರು ಮಾತನಾಡಿಸಿದ್ದಾರೆ. ಮಾತನಾಡಲು ಬಾರದ ಸ್ಥಿತಿಯಲ್ಲಿದ್ದ ಅವರನ್ನು ದಾಂಡೇಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ತಪಾಸಣೆ ನಡೆಸಿದಾಗ ಜೀಶನ್ ಬಷೀರ್ ಕೋಲಾರ ಅವರು ಅತಿಯಾಗಿ ಗಾಂಜಾ ಸೇವಿಸಿದ್ದು ಗೊತ್ತಾಗಿದೆ. ಪೊಲೀಸರು ಅವರಿಗೆ ಬುದ್ದಿ ಹೇಳಿ, ಕೇಸು ದಾಖಲಿಸಿದ್ದಾರೆ.