ಉಡುಪಿ ಪ್ಯಾರಾಡೈಸ್ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡಿದ್ದ ಮಾರುತಿ ತಳವಾರ ಅವರು ದಿಢೀರ್ ಆಗಿ ದುಡುಕು ನಿರ್ಧಾರ ಮಾಡಿದ್ದಾರೆ. ಕ್ರಿಕೆಟ್ ಮೈದಾನದ ಅಂಚಿನ ಗಿಡಕ್ಕೆ ನೇತಾಡುತ್ತಿದ್ದ ಅವರನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಲು ಸಾಧ್ಯವಾಗಿಲ್ಲ.
ADVERTISEMENT
ಮುಂಡಗೋಡದ ನಂದಿಪುರದಲ್ಲಿ ಮಾರುತಿ ಕರಿಯಪ್ಪ ತಳವಾರ ಅವರು ವಾಸವಾಗಿದ್ದರು. 27 ವರ್ಷದ ಅವರು ಉಡುಪಿ ಪ್ಯಾರಾಡೈಸ್ ಹೊಟೇಲಿನಲ್ಲಿ ಮ್ಯಾನೇಜಮೆಂಟ್ ಕೆಲಸ ಮಾಡಿಕೊಂಡಿದ್ದರು. ಎಲ್ಲರ ಜೊತೆ ಚನ್ನಾಗಿಯೇ ಇದ್ದ ಅವರು ದಿಢೀರ್ ಆಗಿ ಸಾವಿನ ನಿರ್ಧಾರ ಮಾಡಿದರು. ಅಗಸ್ಟ 11ರ 3 ಗಂಟೆಯವರೆಗೆ ಚನ್ನಾಗಿಯೇ ಇದ್ದ ಅವರು ರಾತ್ರಿ 9.30ರ ವೇಳೆಗೆ ಶವವಾಗಿದ್ದರು.
ADVERTISEMENT
ಕಾತೂರು ಗ್ರಾಮದ ಕ್ರಿಕೆಟ್ ಗ್ರೌಂಡಿನ ಬಳಿ ಹೋಗಿದ್ದ ಅವರು ಅಲ್ಲಿದ್ದ ಕಾಡು ಮರಕ್ಕೆ ನೇಣು ಹಾಕಿಕೊಂಡರು. ನೇತಾಡುತ್ತಿದ್ದ ಅವರನ್ನು ಸ್ನೇಹಿತರು ನೋಡಿದ್ದು, ತಕ್ಷಣ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರೊಳಗೆ ಮಾರುತಿ ತಳವಾರ ಅವರು ಕೊನೆಯುಸಿರೆಳೆದಿದ್ದರು. ಮಗನ ಸಾವಿನ ಬಗ್ಗೆ ಕರಿಯಪ್ಪ ತಳವಾರ ಅವರು ಪೊಲೀಸರಿಗೆ ಮಾಹಿತಿ ನೀಡಿ, ಕಾನೂನು ಕ್ರಮ ಜರುಗಿಸಿದರು.