ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಕವಂಚೂರಿನ ಅಣ್ಣಪ್ಪ ಮಹಾಲೆ ಅವರು ಅವರ ಮನೆ ಹಿಂದಿನ ಪ್ರದೇಶದಲ್ಲಿ ಶವವಾಗಿದ್ದಾರೆ. ವೀರಭದ್ರೇಶ್ವರ ದೇವರ ಮೆರವಣಿಗೆ ನೋಡಲು ಹೋಗಿದ್ದ ಅವರು ಮರಳಿ ಬರುವಾಗ ಕುಸಿದು ಬಿದ್ದು ಸಾವನಪ್ಪಿದ್ದಾರೆ.
ADVERTISEMENT
ಸಿದ್ದಾಪುರದ ಕವಂಚೂರಿನಲ್ಲಿ ಅಣ್ಣಪ್ಪ ಹೊನ್ನಪ್ಪ ಮಹಾಲೆ ಅವರು ವಾಸವಾಗಿದ್ದರು. 64 ವರ್ಷದ ಅವರು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ದುಡಿದ ಹಣದಲ್ಲಿ ಅಲ್ಪ ಪ್ರಮಾಣವನ್ನು ಅವರು ಸರಾಯಿ ಅಂಗಡಿಗೆ ವಿನಿಯೋಗಿಸುತ್ತಿದ್ದರು. ದಸರಾ ಹಿನ್ನಲೆ ಅವರು ಕೆಲ ದಿನಗಳಿಂದ ಕೆಲಸಕ್ಕೆ ಹೋಗಿರಲಿಲ್ಲ.
ADVERTISEMENT
ಹೀಗಿರುವಾಗ ಅಕ್ಟೊಬರ್ 22ರಂದು ಅವರು ವೀರಭದ್ರೇಶ್ವರ ದೇವರ ಮೆರವಣಿಗೆ ನೋಡಿಕೊಂಡುಬರುವುದಾಗಿ ಮನೆಯಲ್ಲಿ ಹೇಳಿದ್ದರು. ರಾತ್ರಿ 9ಗಂಟೆಗೆ ಊರಿನ ಗೂಡಂಗಡಿ ಬಳಿ ಮಂಜುನಾಥ ಹರಿಜನ ಅವರ ಭೇಟಿ ಮಾಡಿದ್ದರು. ಅದಾದ ನಂತರ ಅವರು ಮೆರವಣಿಗೆ ಮುಗಿಸಿ ಮನೆ ಕಡೆ ಹೊರಟರು. ಆದರೆ, ರಾತ್ರಿಯಾದರೂ ಮನೆಗೆ ಬರಲಿಲ್ಲ. ಮೆರವಣಿಗೆ ಮುಗಿದ ಬಗ್ಗೆ ಊರಿನವರು ಅವರ ಮಗ ಗಣೇಶ ಮಹಾಲೆ ಅವರಿಗೆ ತಿಳಿಸಿದ್ದು, ಹುಡುಕಾಟ ನಡೆಸಿದಾಗ ಮನೆ ಹಿಂದೆ ಬಿದ್ದು ಶವವಾಗಿದ್ದರು.