ಫೇಸ್ಬುಕ್’ಲಿ ನಕಲಿ ಖಾತೆ ಸೃಷ್ಠಿಸಿದ ಬನವಾಸಿಯ ಲೋಕೇಶ ನಾಯ್ಕ ಅವರು ಸಿದ್ದಾಪುರ ವಲಯ ಅರಣ್ಯಾಧಿಕಾರಿ ಉಷಾ ಕಬ್ಬೇರ್ ಅವರ ಅಶ್ಲೀಲ ಮೆಸೆಜ್ ಮಾಡಿದ್ದಾರೆ. ಇದನ್ನು ಪತ್ತೆಹಚ್ಚಿದ ಉಷಾ ಕಬ್ಬೇರ್ ಅವರು ಲೋಕೇಶ ನಾಯ್ಕ ಅವರ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಉಷಾ ಕಬ್ಬೇರ್ ಅವರು ಸಿದ್ದಾಪುರದಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದಾರೆ. ಅತಿಕ್ರಮಣ ತೆರವು ವಿಷಯದಲ್ಲಿ ಅವರು ಕಟ್ಟುನಿಟ್ಟಾಗಿದ್ದಾರೆ. ಬನವಾಸಿಯ ಲೋಕೇಶ ಬಸಪ್ಪ ನಾಯ್ಕ (61) ಅವರು ಹೊಟೇಲ್ ವ್ಯಾಪಾರ ಮಾಡಿಕೊಂಡಿದ್ದು, ನರೂರು ಗ್ರಾಮದ ಅರಣ್ಯದಲ್ಲಿ ಲೋಕೇಶ ನಾಯ್ಕ ಅವರು ಜೋಪಡಿ ನಿರ್ಮಾಣ ಮಾಡಿದ್ದಾರೆ. ಆ ಜೋಪಡಿ ಬಳಿ ಹೋಗಲು ಕಾಡಿನ ಗಿಡ-ಗಂಟಿ ಕಡಿದು ಅವರು ರಸ್ತೆ ಮಾಡಿದ್ದಾರೆ. ಹೀಗಾಗಿ ಅರಣ್ಯಾಧಿಕಾರಿಗಳು ಲೋಕೇಶ ನಾಯ್ಕ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಕೇಸು ದಾಖಲಿಸಿದ ಕಾರಣ ಸಿಟ್ಟಿನಿಂದ ಇದ್ದ ಲೋಕೇಶ ನಾಯ್ಕ ಅವರು ಎಲ್ ಬಿ ನಾಯಕ ಎಂಬ ಹೆಸರಿನಲ್ಲಿ ಫೇಸ್ಬುಕ್ ಖಾತೆಯೊಂದನ್ನು ರಚಿಸಿದ್ದಾರೆ. ಆ ಖಾತೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅರಣ್ಯಾಧಿಕಾರಿ ಉಷಾ ಕಬ್ಬೇರ್ ಅವರ ವಿರುದ್ಧ ಕೆಟ್ಟದಾಗಿ ಬರೆದಿದ್ದಾರೆ. ಜೂನ್ 30ರಂದು ಸಿದ್ದಾಪುರದಲ್ಲಿ ಮಾವಿನಗುಂಡಿ ಹಲಗೇರಿ ಹೊಸೂರಿನಲ್ಲಿ ಅರಣ್ಯ ಅತಿಕ್ರಮಣ ಖುಲ್ಲಾ ಪಡಿಸುವ ಕೆಲಸ ನಡೆದಿದ್ದು, ವಿಶ್ವಂಭರ ಟಿವಿಯವರು ಜುಲೈ 30ರಂದು ಈ ವರದಿ ಪ್ರಕಟಿಸಿದ್ದಾರೆ. `ಯೋಧನ ಅರಣ್ಯ ಒಕ್ಕಲೆಬ್ಬಿಸುವ ಪ್ರಯತ್ನ-ಅರಣ್ಯವಾಸಿಗಳ ಆಕ್ರೋಶ’ ಎಂಬ ಶಿರ್ಷಿಕೆಯಡಿ ಪ್ರಸಾರವಾದ ವಿಡಿಯೋಗೆ ಲೋಕೇಶ ನಾಯ್ಕ ಅವರು ಕಮೆಂಟ್ ಮಾಡಿದ್ದಾರೆ. ಎಲ್ ಬಿ ನಾಯಕ ಹೆಸರಿನಲ್ಲಿ ಫೇಸ್ಬುಕ್ ಖಾತೆ ಮೂಲಕ ಅರಣ್ಯಾಧಿಕಾರಿ ಉಷಾ ಕಬ್ಬೇರ್ ಅವರ ವಿರುದ್ಧ ಅಶ್ಲೀಲವಾಗಿ ಬರೆದಿದ್ದಾರೆ.
ಅದಾದ ನಂತರ ಆ ಬರಹದ ಸ್ಕಿನ್‌ಶಾಟ್ ತೆಗೆದು ಅದನ್ನು ವಾಟ್ಸಪ್ ಮೂಲಕ ಹರಿಬಿಟ್ಟಿದ್ದಾರೆ. ಈ ವಿಷಯ ಉಷಾ ಕಬ್ಬೇರ್ ಅವರ ಗಮನಕ್ಕೆ ಬಂದಿದ್ದು, ಅವರು ತಮ್ಮ ವಿರುದ್ಧ ಕೆಟ್ಟ ಕಮೆಂಟ್ ಮಾಡಿದವರನ್ನು ಹುಡುಕಿದ್ದಾರೆ. ನಂತರ ಲೋಕೇಶ ನಾಯ್ಕ ಅವರ ವಿರುದ್ಧ ಕಾನೂನು ಕ್ರಮಕ್ಕಾಗಿ ಪೊಲೀಸ್ ದೂರು ನೀಡಿದ್ದಾರೆ.
`ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆಗೆ ಮಾತ್ರ ಬಳಸಿ’