ಇಡಗುಂದಿಯ ಸಂತೋಷ ನಾಯ್ಕ ಹಾಗೂ ಜಲಾಲುದ್ದಿನ್ ಶೇಖ್ ಸೇರಿ ಅಂಕಿ-ಸoಖ್ಯೆಗಳ ಆಧಾರದಲ್ಲಿ ಅದೃಷ್ಟದ ಆಟ ಆಡಿಸುತ್ತಿದ್ದು, ಆ ಅದೃಷ್ಟ ಅವರಿಗೆ ಕೈ ಕೊಟ್ಟಿದೆ. 1 ರೂಪಾಯಿ ಹೂಡಿಕೆ ಮಾಡಿದರೂ 80ರೂಪಾಯಿ ಲಾಭ ಕೊಡುವುದಾಗಿ ಹೇಳುತ್ತಿದ್ದ ಅವರಿಬ್ಬರ ಆಟಕ್ಕೂ ಪೊಲೀಸರು ತಡೆ ಒಡ್ಡಿದ್ದಾರೆ.
ಯಲ್ಲಾಪುರ ಇಡಗುಂದಿಯ ಜನತಾ ಕಾಲೋನಿಯಲ್ಲಿ ಸಂತೋಷ ರಾಮಚಂದ್ರ ನಾಯ್ಕ ಅವರು ವಾಸವಾಗಿದ್ದಾರೆ. 35 ವರ್ಷದ ಅವರು ವ್ಯಾಪಾರಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ಈ ವ್ಯಾಪಾರದ ಜೊತೆ ಅವರು ಅಂಕಿ-ಸAಖ್ಯೆಗಳ ಮಾರಾಟವನ್ನು ಮಾಡುತ್ತಾರೆ. ಅದೇ ಇಡಗುಂದಿಯ ಜನತಾ ಕಾಲೋನಿಯಲ್ಲಿರುವ ಜಲಾಲುದ್ದಿನ್ ಅಹ್ಮದ್ ಸಾಬ್ ಶೇಖ್ ಅವರು ಮಟ್ಕಾ ಬುಕ್ಕಿಯಾಗಿದ್ದು, ಕಮಿಷನ್ ನೀಡುವ ಆಸೆ ತೋರಿಸಿ ಸಂತೋಷ ನಾಯ್ಕ ಅವರಿಂದ ಈ ಆಟ ಆಡಿಸುತ್ತಿದ್ದಾರೆ.
ಅಗಸ್ಟ 19ರಂದು ಸಂತೋಷ ನಾಯ್ಕ ಅವರು ಮಟ್ಕಾ ಆಡಿಸಿ 1120ರೂ ಸಂಗ್ರಹ ಮಾಡಿದ್ದರು. 1ರೂಪಾಯಿಗೆ 80ರೂ ಸಿಗುವ ಆಸೆಗೆ ಬಿದ್ದು ಅನೇಕರು ಅವರ ಬಳಿ ಹಣ ಹೂಡಿದ್ದರು. ಪಿಸೈ ರಾಜಶೇಖರ ವಂದಲಿ ಅವರಿಗೆ ಈ ವಿಷಯ ಗೊತ್ತಾಗಿದ್ದು, ತಮ್ಮ ತಂಡದ ಜೊತೆ ಅವರು ಅಲ್ಲಿ ದಾಳಿ ಮಾಡಿದರು. ಆಗ, ಸಂತೋಷ ನಾಯ್ಕ ಅವರು ಸಿಕ್ಕಿಬಿದ್ದರು. ಈ ಎಲ್ಲಾ ಹಣವನ್ನು ಜಲಾಲುದ್ದಿನ್ ಅಹ್ಮದ್ ಸಾಬ್ ಶೇಖ್ ಅವರಿಗೆ ನೀಡುವುದಾಗಿ ಅವರು ಒಪ್ಪಿಕೊಂಡರು. ಕಾನೂನುಬಾಹಿರ ಕ್ರೀಡೆ ಆಡಿದ ಕಾರಣ ಅವರಿಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದರು.
`ಜೂಜಾಟದಿಂದ ಜೀವನ ಹಾಳು’