ನಾಲ್ಕು ದಶಕದ ಹಿಂದೆ ನಿರ್ಮಿಸಲಾದ ಕಾರವಾರದ ರಂಗ ಮಂದಿರ ಸಂಪೂರ್ಣ ಶಿಥಿಲಗೊಂಡಿದ್ದು, ಹೊಸ ರಂಗ ಮಂದಿರ ನಿರ್ಮಾಣಕ್ಕೆ ಜಿಲ್ಲಾಡಳಿತ ಆಸಕ್ತಿವಹಿಸಿದೆ. ಕಲಾತ್ಮಕ ಮತ್ತು ಆಕರ್ಷಕವಾದ ನೂತನ ರಂಗಮoದಿರ ನಿರ್ಮಾಣಕ್ಕೆ ಹೊಸ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ನಿದೇರ್ಶನ ನೀಡಿದ್ದಾರೆ.
ಇಲ್ಲಿನ ಮಾಲಾದೇವಿ ಮೈದಾನದ ಒಂದು ಬದಿಯಲ್ಲಿ ಜಿಲ್ಲಾ ರಂಗಮoದಿರ ಇದೆ. 1986ರಲ್ಲಿ ರಂಗ ಮಂದಿರ ನಿರ್ಮಾಣವಾಗಿತ್ತು. 600 ಜನರ ಆಸನವಿದ್ದ ಈ ರಂಗ ಮಂದಿರ ನಾಲ್ಕು ದಶಕ ಸೇವೆ ಸಲ್ಲಿಸಿದ್ದು, 2012ರಲ್ಲಿ ಕಟ್ಟಡದ ನವೀಕರಣ ನಡೆದಿತ್ತು. ಆದರೆ, ಅದು ಸಹ ಸರಿಯಾಗಿ ಆಗಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಸಂಪೂರ್ಣವಾಗಿ ಹಾಳಾಗಿತ್ತು. ಶಿಥಿಲಾವಸ್ಥೆಯ ಕಾರಣದಿಂದ ಇಲ್ಲಿ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಮೊದಲು 8 ಸಾವಿರ ರೂ ಕೊಟ್ಟರೆ ಈ ರಂಗ ಮಂದಿರ ಬಾಡಿಗೆಗೆ ಸಿಗುತ್ತಿತ್ತು. ಇದೀಗ 25 ಸಾವಿರ ರೂ ಕೊಟ್ಟರೂ ಉತ್ತಮ ಕಟ್ಟಡ ಸಿಗುತ್ತಿರಲಿಲ್ಲ. ಮಳೆಗಾಲದ ಅವಧಿಯಲ್ಲಿ ರಂಗ ಮಂದಿರ ಸೋರುತ್ತಿತ್ತು. 2024ರಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಟ್ಟಡ ಗಮನಿಸಿ ಅದು ಬಳಕೆಗೆ ಅಯೋಗ್ಯ ಎಂದು ವರದಿ ನೀಡಿದ್ದರು. ಅದಾಗಿಯೂ, ಬೀಳುವ ಹಂತದಲ್ಲಿರುವ ರಂಗ ಮಂದಿರದ ಕಟ್ಟಡದಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ನಡೆಯುತ್ತಿದ್ದು, ಅಧಿಕಾರಿ ಹಾಗೂ ಸಿಬ್ಬಂದಿ ಅಲ್ಲಿಯೇ ದಿನ ದೂಡುತ್ತಿದ್ದರು.
ಈ ಎಲ್ಲಾ ಹಿನ್ನಲೆ ಮೂರು ವರ್ಷದ ಹಿಂದೆ ನೂತನ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅದಕ್ಕೆ ಸರ್ಕಾರದಿಂದ ಉತ್ತರ ಬಂದಿರಲಿಲ್ಲ. ಹೀಗಾಗಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಂಗಮAದಿರ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಸಭೆ ನಡೆಸಿದ ಡೀಸಿ `ಪ್ರಸ್ತುತ ಕಟ್ಟಡ ನಿರ್ಮಾಣ ದರಗಳು ಕೂಡಾ ಪರಿಷ್ಕೃತಗೊಂಡಿರುವುದರಿAದ ಲೋಕೋಪಯೋಗಿ ಇಲಾಖೆ ವತಿಯಿಂದ ಹೊಸದಾಗಿ ಅಂದಾಜು ಪಟ್ಟಿಯನ್ನು ಪಡೆದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಹೊಸ ರಂಗಮAದಿರ ನಿರ್ಮಾಣಕ್ಕೆ ನೂತನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ 20 ಗುಂಟೆ ಜಾಗವನ್ನು ಗುರುತಿಸಲಾಗಿದ್ದು, ಇದನ್ನು ರಂಗಮAದಿರ ನಿರ್ಮಾಣಕ್ಕೆ ಮೀಸಲಿಡುವ ಕುರಿತಂತೆ ದಾಖಲೆಗಳನ್ನು ಪಡೆಯಲು ಅಗತ್ಯ ಕ್ರಮ ಜರುಗಿಸಬೇಕು’ ಎಂದು ಸೂಚಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಎನ್ ವಾಸರೆ ಅವರು ಮಾತನಾಡಿ `ನೂತನ ರಂಗಮAದಿರವನ್ನು ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಪಯೋಗವಾಗುವ ರೀತಿಯಲ್ಲಿ ನಿರ್ಮಿಸಬೇಕು. ಇದರಲ್ಲಿ ಆರ್ಟ್ ಗ್ಯಾಲರಿ, ಗ್ರಂಥಾಲಯ, ಉತ್ತಮ ರೀತಿಯ ಧ್ವನಿ ಬೆಳಕು, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆೆ ಎಲ್ಲಾ ರೀತಿಯ ಅನುಕೂಲಗಳಿರಬೇಕ’ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿ ಪಂ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ತಹಸೀಲ್ದಾರ ನಿಶ್ಚಲ್ ನರೋನಾ, ಪೌರಾಯುಕ್ತ ಜಗದೀಶ ಹುಲಗಜ್ಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಮಾ ನಾಯ್ಕ ಹಾಗೂ ಲೋಕೋಪಯೋಗಿ ಮತ್ತು ಪಂ.ರಾಜ್ ಇಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಇದ್ದರು.