`ನಿರಂತರ ಪಾದಯಾತ್ರೆ ಮಾಡಿದ ಬಿಜೆಪಿಗರ ಬಿಪಿ-ಶುಗರ್ ನಿಯಂತ್ರಣಕ್ಕೆ ಬಂದಿದೆ. ಅದರಿಂದ ಬಿಜೆಪಿಗರ ಆರೋಗ್ಯ ತಪಾಸಣೆ ಮಾಡುವ ವೈದ್ಯರಿಗೆ ನಷ್ಟವಾಗಿದೆ’ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಗರು ನಡೆಸುತ್ತಿರುವ `ಬಳ್ಳಾರಿ ಚಲೋ’ ಪಾದಯಾತ್ರೆಯನ್ನು ಲಕ್ಷ್ಮಣ ಸವದಿ ಅವರು ಟೀಕಿಸಿದ್ದಾರೆ.
ಅಂಕೋಲಾಗೆ ಆಗಮಿಸಿದ ಲಕ್ಷ್ಮಣ ಸವದಿ ಅವರು ಮಾಧ್ಯಮದವರ ಜೊತೆ ಮಾತನಾಡಿದ್ದು, `ಬಿಜೆಪಿಗರ ಪಾದಯಾತ್ರೆಯಿಂದ ಕಾಂಗ್ರೆಸ್ ಆಡಳಿತಕ್ಕೆ ಕೊಂಚವೂ ಆತಂಕವಿಲ್ಲ. ಪಾದಯಾತ್ರೆ ಮೂಲಕ ಬಿಜೆಪಿಗರು ಬಿಪಿ-ಶುಗರ್ ನಿಯಂತ್ರಿಸಿಕೊoಡಿದ್ದು, ಅವರ ವೈದ್ಯಕೀಯ ತಪಾಸಣೆ ನಡೆಸುವ ವೈದ್ಯರ ಆದಾಯಕ್ಕೆ ನಷ್ಟ ಆಗುತ್ತಿದೆ. ಈ ಪಾದಯಾತ್ರೆಯಿಂದ ಬಿಜೆಪಿಗರ ಆರೋಗ್ಯ ಸುಧಾರಣೆ ಆಗುವುದು ಮಾತ್ರ ದೊಡ್ಡ ಲಾಭ’ ಎಂದವರು ಪ್ರತಿಕ್ರಿಯಿಸಿದ್ದಾರೆ. `ಬಿಜೆಪಿ ಪಾದಯಾತ್ರೆಯಿಂದ ಆಡಳಿತ ಪಕ್ಷಕ್ಕೆ ಯಾವುದೇ ಆತಂಕವಿಲ್ಲ’ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರದ ಆಡಳಿತ ವೈಪಲ್ಯ ಹಾಗೂ ಭ್ರಷ್ಟಾಚಾರದ ವಿರುದ್ಧ ಬಿಜೆಪಿಗರು ಪಾದಯಾತ್ರೆ ನಡೆಸಿದ್ದು, `ಅದರಿಂದ ಕಾಂಗ್ರೆಸ್ ಆಡಳಿತಕ್ಕೆ ಯಾವ ಸಮಸ್ಯೆಯೂ ಇಲ್ಲ’ ಎಂದು ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. ನಿಗಮ ಮಂಡಳಿ ಸ್ಥಾನ ಹಂಚಿಕೆ ಕುರಿತು ಮಾತನಾಡಿದ ಅವರು `ಮುಖ್ಯಮಂತ್ರಿಗಳೇ ತಮ್ಮ ಸ್ಥಾನ ಬಿಟ್ಟು ಬೇರೆಯವರಿಗೆ ಕೊಟ್ಟಿದ್ದಾರೆ. ಹೀಗಿರುವಾಗ ನಿಗಮ ಮಂಡಳಿಯ ಅಧ್ಯಕ್ಷರು ಸಹ ಅದನ್ನು ಬಿಡಬೇಕು. ಆ ಬಗ್ಗೆ ಮೊದಲೇ ಮಾತುಕಥೆ ನಡೆದಿದ್ದು, ಶೀಘ್ರದಲ್ಲಿಯೇ ನಿಗಮ ಮಂಡಳಿಗಳಿಗೂ ನೇಮಕ ನಡೆಯಲಿದೆ’ ಎಂದರು.