ಗಣೇಶ ಹಬ್ಬದ ಅವಧಿಯಲ್ಲಿ ಕೆಲವರು ಮದ್ಯಪಾನ ಮಾಡಿ ಮಹಿಳೆಯರಿಗೆ ತೊಂದರೆ ನೀಡುವುದನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯುವ ದಿನ ಸರಾಯಿ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ. ಬೇರೆ ಬೇರೆ ದಿನಗಳಂದು ಬೇರೆ ಬೇರೆ ಊರುಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ನಡೆಯಲಿದ್ದು, ಅದರ ಅನುಗುಣವಾಗಿ ಮದ್ಯ ನಿಷೇಧ ಜಾರಿಯಾಗುವಂತೆ ಅವರು ಈ ಆದೇಶ ಹೊರಡಿಸಿದ್ದಾರೆ.
ಅದರ ಪ್ರಕಾರ, ಭಟ್ಕಳ ಶಹರ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 16ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ ಹಾಗೂ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 14ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ ಸರಾಯಿ ಮಾರಾಟ ಹಾಗೂ ಸಾಗಾಟ ನಿಷೇಧಿಸಲಾಗಿದೆ. ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ 24ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರಗೆ, ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ 16ರ ಬೆಳಗ್ಗೆ 6 ಗಂಟೆಯಿoದ 48 ಗಂಟೆಯವರೆಗೆ ಹಾಗೂ ಸೆ.20 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ. ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ 18ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ ಹಾಗೂ ಸೆ 22 ರ ಬೆಳ್ಳಗೆ 6 ಗಂಟೆಯಿoದ 24 ಗಂಟೆಯವರೆಗೆ ಸರಾಯಿ ಮಾರಾಟವನ್ನು ನಿಷೇಧಿಸಲಾಗಿದೆ. ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ 18ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರಗೆ ಮತ್ತು ಸೆ.20ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ. ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ 17ರ ಬೆಳಗ್ಗೆ 6 ಗಂಟೆಯಿoದ 48 ಗಂಟೆಯವರೆಗೆ ಸರಾಯಿ ನಿಷೇಧಿಸಲಾಗಿದೆ.
ಕಾರವಾರ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ 18ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರಗೆ ಹಾಗೂ ಸೆ 20ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ, ಸೆ.22 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ, ಸೆ.24 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರಗೆ ಮದ್ಯ ಮಾರಾಟ ನಿಷೇಧಿಸಿದೆ. ಮಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.20 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರಗೆ, ಸೆ.22 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ, ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.15 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರಗೆ, ಸೆ.18 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ, ಸೆ.20 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ, ಸೆ.22 ರ ಬೆಳಗ್ಗೆ 6 ಗಂಟೆಯಿAದ ಸೆ.25 ರ ಬೆಳಗ್ಗೆ 6 ಗಂಟೆಯವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಶಿರಸಿ ತಾಲೂಕು ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿAದ ಸೆ.20 ರ ಬೆಳಗ್ಗೆ 6 ಗಂಟೆಯವರೆಗೆ, ಸೆ.23 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ, ಸೆ.25 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ, ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರಗೆ, ಸೆ.20 ರ ಬೆಳಗ್ಗೆ 6 ಗಂಟೆಯಿAದ ಸೆ.21 ಬೆಳಗ್ಗೆ 6 ಗಂಟೆಯವರೆಗೆ ಸರಾಯಿ ಮಾರಾಟ ನಿಷೇಧಿಸಲಾಗಿದೆ.
ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರಗೆ, ಸೆ.20 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ, ಸೆ.22 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರಗೆ, ಸೆ.26 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ, ಯಲ್ಲಾಪುರ ಪಟ್ಟಣ, ಮಂಚಿಕೇರಿ , ಕಿರವತ್ತಿಯಲ್ಲಿ .ಸೆ.18 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ ಸೆ.20 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ ಹಾಗೂ ಸೆ.24 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ ಸರಾಯಿ ಮಾರಾಟ ನಿಷೇಧಿಸಿದೆ. ದಾಂಡೇಲಿ ತಾಲೂಕು ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ, ಸೆ.20 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರಗೆ, ಸೆ.22 ರ ಬೆಳಗ್ಗೆ 22 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ, ಸೆ.25 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ ಸರಾಯಿ ನಿಷೇಧಿಸಲಾಗಿದೆ. ಹಳಿಯಾಳ ತಾಲೂಕು ವ್ಯಾಪ್ತಿಯಲ್ಲಿ ಸೆ.18 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ, ಸೆ.20 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರಗೆ, ಸೆ.22 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ, ಸೆ.24 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ ಹಾಗೂ ಜೋಯಿಡಾ ತಾಲೂಕು ವ್ಯಾಪ್ತಿಯಲ್ಲಿ ಸೆ.20 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ, ಸೆ.22 ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರೆಗೆ, ಸೆ.24 ರ ಬೆಳಗ್ಗೆ 6 ಗಂಟೆಯಿAದ 48 ಗಂಟೆಯವರೆಗೆ, ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆ.20 ರ ಬೆಳಗ್ಗೆ 6 ಗಂಟೆಯಿAದ 24 ಗಂಟೆಯವರಗೆ, ಸೆ.22 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ, ಸೆ.25 ರ ಬೆಳಗ್ಗೆ 6 ಗಂಟೆಯಿoದ 24 ಗಂಟೆಯವರೆಗೆ ಸರಾಯಿ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ವೈನ್ ಶಾಪ್ ಮತ್ತು ಬಾರ್ ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೆ ಲಕ್ಷಿಪ್ರಿಯಾ ಆದೇಶ ಹೊರಡಿಸಿದ್ದಾರೆ.