ಮೊಹಮ್ಮದ ಸಿಮ್ರಾನ ಹಾಗೂ ಮೊಹಮ್ಮದ ಅಖೀಲ್ ಸೇರಿ ಮೊಹಮ್ಮದ ಇಮ್ರಾನ ಅವರಿಗೆ 10 ಸಾವಿರ ರೂ ಮೌಲ್ಯದ ಗಾಂಜಾ ಮಾರಾಟಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ದಾಳಿ ನಡೆಸಿದ ಭಟ್ಕಳ ಪೊಲೀಸರು ಅವರ ವ್ಯಾಪಾರಕ್ಕೆ ಅಡ್ಡಗಾಲು ಹಾಕಿದ್ದಾರೆ. ಗಾಂಜಾ ಸೇವನೆ, ಸಾಗಾಟ ಹಾಗೂ ಮಾರಾಟದ ದುಷ್ಪರಿಣಾಮಗಳ ಬಗ್ಗೆ ಅವರಿಗೆ ತಿಳಿಸಿ, ಕಾನೂನು ಕ್ರಮ ಜರುಗಿಸಿದ್ದಾರೆ.
Advertisement. Scroll to continue reading.
ಭಟ್ಕಳದ ಹುರುಳಿಸಾಲದ ಕನ್ನಡ ಶಾಲೆಯ ಬಳಿ ಮೊಹಮ್ಮದ ಸಿಮ್ರಾನ ಉಸ್ಮಾನ ಸನದಿ ಅವರು ವಾಸವಾಗಿದ್ದಾರೆ. ಅವರು ಜಾಲಿ ರೋಡಿನ ಮೊಹಮ್ಮದ ಅಖೀಲ್ ತಂದೆ ಮೊಹಮ್ಮದ ಜಾಫರ್ ಶೇಖ್ ಅವರ ಜೊತೆ ಸೇರಿ 146 ಗ್ರಾಂ ಗಾಂಜಾ ಸಂಗ್ರಹಿಸಿದ್ದಾರೆ. ಅವರಿಬ್ಬರು ಸೇರಿ ಅದನ್ನು ಚೌಥನಿ ಸೇತುವೆ ಬಳಿಯ ಮೊಹಮ್ಮದ ಇಮ್ರಾನ ಅಬ್ದುಲ ಗಫಾರ್ ಅವರಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ನಡೆದ ಮಾತುಕಥೆಯ ಪ್ರಕಾರ ಚೌಥನಿ ಸೇತುವೆ ಬಳಿಯ ಮೊಹಮ್ಮದ ಇಮ್ರಾನ ತಂದೆ ಅಬ್ದುಲ ಗಫಾರ್ ಅವರು ಗಾಂಜಾ ಖರೀದಿಗೆ ಆಗಮಿಸಿದ್ದು, ಆ ವೇಳೆ ಭಟ್ಕಳ ಪಿಸೈ ನವೀನ್ ಎಸ್ ನಾಯ್ಕ ಅವರು ಆ ಎಲ್ಲರ ಮೇಲೆ ದಾಳಿ ಮಾಡಿದ್ದಾರೆ.
Advertisement. Scroll to continue reading.
ಪೊಲೀಸ ನಿರೀಕ್ಷಕರಾದ ದಿವಾಕರ ಪಿ ಎಂ ಅವರ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ದಿನೇಶ ನಾಯಕ, ಸುರೇಶ ದೇವಾಡಿಗ, ರೇವಣಸಿದ್ದಪ್ಪ, ಆನಂದ ಗೋನಿ, ಅನೀಲ್ ರಾಥೋಡ, ಗಿರೀಶ್ ಎಸ್ ಎಂ ಅವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಅವರೆಲ್ಲರೂ ಸೇರಿ ಗಾಂಜಾ ಮಾರಾಟಗಾರ ಹಾಗೂ ಗಾಂಜಾ ಖರೀದಿದಾರರಿಬ್ಬರನ್ನು ವಶಕ್ಕೆಪಡೆದಿದ್ದಾರೆ. ಅಗಸ್ಟ 30ರ ಮಧ್ಯಾಹ್ನದ ವೇಳೆ ಈ ದಾಳಿ ನಡೆದಿದ್ದು, ಅವರೆಲ್ಲರನ್ನು ಪೊಲೀಸರು ಕೋರ್ಟಿಗೆ ಒಪ್ಪಿಸಿದ್ದಾರೆ. ಅವರ ಬಳಿಯಿದ್ದ 500ರೂ ಹಣವನ್ನು ಜಪ್ತು ಮಾಡಿದ್ದಾರೆ. ನ್ಯಾಯಾಲಯ ಎಲ್ಲರಿಗೂ ನ್ಯಾಯಾಂಗ ಬಂಧನವಿಧಿಸಿದೆ.
Advertisement. Scroll to continue reading.