Advertisement. Scroll to continue reading.
ಗಣೇಶ ಹಬ್ಬದ ಹಿನ್ನಲೆ ಗೋವಾದಲ್ಲಿ ಭರ್ಜರಿ ಲಾಟರಿ ಟಿಕೆಟ್ ಮಾರಾಟ ನಡೆದಿದ್ದು, ಆ ಟಿಕೆಟ್ ಮಾರಾಟಗಾರರು ಗಡಿ ದಾಟಿ ಉತ್ತರ ಕನ್ನಡಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧವಿರುವ ಕಾರಣ ಪೊಲೀಸರು ಅವರನ್ನು ವಶಕ್ಕೆಪಡೆದಿದ್ದಾರೆ.
ಗೋವಾದ ವಿನೋದ ವಾಂಗಲೆ ಅವರು ಸೋಮವಾರ ಕಾರವಾರಕ್ಕೆ ಬಂದಿದ್ದರು. ಬರುವಾಗ ಅವರು ಒಂದಷ್ಟು ಲಾಟರಿ ಟಿಕೆಟ್ ತಂದಿದ್ದರು. ಕಾರವಾರದ ಮೀನು ಮಾರುಕಟ್ಟೆ ಬಳಿ ವಿನೋದ ವಾಂಗೆಲೆ ಅವರು ಆ ಟಿಕೆಟ್ ಮಾರಾಟ ಮಾಡುತ್ತಿದ್ದರು. 500ರೂಪಾಯಿಗೆ ಒಂದು ಟಿಕೆಟ್ ಆಧಾರದಲ್ಲಿ ಅವರು ಅದನ್ನು ಮಾರಲು ಶುರು ಮಾಡಿದ್ದರು. ಬಗೆ ಬಗೆಯ ಬಹುಮಾನದ ಆಸೆಗೆ ಜನ ಆ ಟಿಕೆಟ್ ಖರೀದಿಗೆ ಮುಗಿ ಬಿದ್ದಿದ್ದರು. ಜನ ಹೆಚ್ಚಾದ ಹಾಗೇ ಟಿಕೆಟ್ ಬೆಲೆಯನ್ನು ಅವರು ಏರಿಸಿದ್ದು, ಈ ವಿಷಯ ಪೊಲೀಸ್ ಠಾಣೆಯವರೆಗೆ ಹೋಗಿ ಮುಟ್ಟಿತು. ಲಾಟರಿ ನಿಷೇಧವಿರುವ ರಾಜ್ಯದಲ್ಲಿ ಲಾಟರಿ ಮಾರಾಟಕ್ಕೆ ಬಂದಿದ್ದ ವಿನೋದ ವಾಂಗಲೆ ಅವರನ್ನು ಪೊಲೀಸರು ಹಿಡಿದರು.
Advertisement. Scroll to continue reading.
ಗೋವಾ ರಾಜ್ಯದ ಪೊಂಡಾದ ಗಣೇಶೋತ್ಸವ ಸಮಿತಿಯ ಹೆಸರಿನಲ್ಲಿದ್ದ ಲಾಟರಿ ಟಿಕೆಟ್’ನ್ನು ಪೊಲೀಸರು ಪರಿಶಿಲನೆ ಮಾಡಿದರು. ದೊಡ್ಡ ದೊಡ್ಡ ಬಹುಮಾನದ ಆಮೀಷ ಒಡ್ಡಿ ಅದನ್ನು ಮಾರಾಟ ಮಾಡುತ್ತಿರುವುದನ್ನು ಗಮನಿಸಿದರು. ಮೀನು ಮಾರುಕಟ್ಟೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ವಿನೋದ ವಾಂಗಲೆ ಅವರು ಸಿಕ್ಕಿಬಿದ್ದಿದ್ದು, ಅವರನ್ನು ವಶಕ್ಕೆಪಡೆದು ವಿಚಾರಣೆ ಶುರು ಮಾಡಿದರು. ಆರೋಪಿತನ್ನು ಪೊಲೀಸ್ ಠಾಣೆಗೆ ಕರೆತಂದು ಮಾಡಿದ ತಪ್ಪಿನ ಬಗ್ಗೆ ವಿವರಿಸಿದರು. ಕರ್ನಾಟಕದ ಯಾವ ಭಾಗದಲ್ಲಿಯೂ ಲಾಟರಿ ಮಾರಾಟ ಮಾಡುವ ಹಾಗಿಲ್ಲ ಎಂಬ ನಿಯಮ ತಿಳಿಸಿ, ಎಚ್ಚರಿಕೆ ನೀಡಿದರು. ಅದಾದ ನಂತರ ಮಾಡಿದ ತಪ್ಪಿಗೆ ಪ್ರತಿಯಾಗಿ ಕಾನೂನು ಕ್ರಮವನ್ನು ಜರುಗಿಸಿದರು.
Advertisement. Scroll to continue reading.