ಶಿಕಾರಿ ಶೂರರಾದ ಶಂಕರ್ ಸಿದ್ದಿ ಹಾಗೂ ನರಸಿಂಹ ಸಿದ್ದಿ ಅವರು ತಾವು ಮಾಡಿದ ಹುಚ್ಚು ಸಾಹಸಗಳ ಬಗ್ಗೆ ಊರಿನ ತುಂಬಾ ಹೇಳಿಕೊಂಡಿದ್ದು, ಅದೇ ಅವರಿಗೆ ಮುಳುವಾಗಿದೆ. ಕುಡುಕನೊಬ್ಬ ನೀಡಿದ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ವನ್ಯಜೀವಿ ಹತ್ಯೆಗೆ ಸಂಬoಧಿಸಿದ ಭಾರೀ ಪ್ರಮಾಣದ ಕುರುಹುಗಳು ದೊರೆತಿದೆ.
ಯಲ್ಲಾಪುರದ ಉಪಳೇಶ್ವರ ಗ್ರಾಮದಲ್ಲಿ ಮಂಗಳವಾರ ಸಂಜೆ ಶಿರಸಿಯ ಸಂಚಾರಿ ಅರಣ್ಯ ದಳದವರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ 15 ಕೆಜಿಯಷ್ಟು ಚಿಪ್ಪು ಹಂದಿಯ ಚಿಪ್ಪು, ಎರಡು ಕಾಡೆಮ್ಮೆಯ ಕೊಂಬು, ಎಂಟು ಹುಲಿ ಉಗುರು, 12 ಚಿರತೆಯ ಉಗುರು, ಆರು ಕಾಡು ಹಂದಿಯ ಹಲ್ಲುಗಳು ಸಿಕ್ಕಿವೆ. ಅದರೊಂದಿಗೆ ಈ ಎಲ್ಲಾ ವನ್ಯಜೀವಿ ಅಂಗಾAಗಗಳ ಸಾಗಾಟಕ್ಕೆ ಬಳಸಿದ್ದ ಬೈಕನ್ನು ಅರಣ್ಯ ಅಧಿಕಾರಿಗಳು ವಶಕ್ಕೆಪಡೆದಿದ್ದಾರೆ.
ಶಂಕರ್ ಸಿದ್ದಿ ಹಾಗೂ ನರಸಿಂಹ ಸಿದ್ದಿ ಅನಾಧಿಕಾಲದಿಂದಲೂ ಶಿಕಾರಿ ಮಾಡುತ್ತಿದ್ದು, ಜೊತೆಗೆ ವನ್ಯಜೀವಿಗಳ ಅಂಗಾoಗ ಮಾರಾಟ ಮಾಡಿ ಹಣ ಮಾಡುತ್ತಿದ್ದರು. ತಾವು ಮಾಡುವ ಈ ರಹಸ್ಯ ಲಸದ ಬಗ್ಗೆ ಅವರು ಅಲ್ಲಲ್ಲಿ ಗರ್ವದಿಂದ ಹೇಳಿಕೊಳ್ಳುತ್ತಿದ್ದರು. ಉಪಳೇಶ್ವರಕ್ಕೆ ಬರುವ ಮುನ್ನ ಅವರು ಕುಡುಕನೊಬ್ಬನಲ್ಲಿ ತಮ್ಮ ಸಾಧನೆ ಹೇಳಿಕೊಂಡಿದ್ದು, ದೊಡ್ಡ ಡೀಲ್ ಮಾಡಲು ಉಪಳೇಶ್ವರಕ್ಕೆ ಹೋಗುವ ಬಗ್ಗೆ ಹೇಳಿದ್ದರು. ಕುಡಿದ ನಶೆಯಲ್ಲಿ ಆ ಕುಡುಕ ಈ ವಿಷಯವನ್ನು ಮತ್ತೊಬ್ಬರಿಗೆ ಹೇಳಿದ್ದು, ಅದು ಅರಣ್ಯ ಅಧಿಕಾರಿಗಳ ಕಿವಿಗೆ ಬಿದ್ದಿತ್ತು. ಆ ವಿಶ್ವಾಸಾರ್ಹ ಮಾಹಿತಿ ಅನ್ಯವ ಅರಣ್ಯ ಸಂಚಾರಿ ದಳದವರು ವಿಶೇಷ ಕಾರ್ಯಾಚರಣೆ ಮಾಡಿದರು.
Advertisement. Scroll to continue reading.
ಶಂಕರ್ ಸಿದ್ದಿ ಮತ್ತು ನರಸಿಂಹ ಸಿದ್ದಿ ದಾಳಿ ವೇಳೆ ಸಿಕ್ಕಿ ಬಿದ್ದರು. ಈ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾದ ಶಂಕೆಯಿದ್ದು, ಅಧಿಕಾರಿಗಳು ಅವರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.