ತೆಂಕಣಕೇರಿ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಕಿ ಬಿದ್ದಿದೆ. ತಡರಾತ್ರಿ ನಡೆದ ಅಗ್ನಿ ಅವಘಡದಲ್ಲಿ ಶಾಲೆಯ ಕೋಣೆಗಳೆರಡು ಸುಟ್ಟು ಹೋಗಿದೆ.
ADVERTISEMENT
ಬುಧವಾರ ರಾತ್ರಿ ಶಾಲೆಯಲ್ಲಿ ಅಗ್ನಿ ಆಕಸ್ಮಿಕ ನಡೆದಿದೆ. ಬೆಂಕಿ ಹೊತ್ತಿ ಉರಿಯುವುದನ್ನು ನೋಡಿದ ಜನ ಅದನ್ನು ಆರಿಸುವ ಪ್ರಯತ್ನ ಮಾಡಿದ್ದಾರೆ. ದಟ್ಟ ಹೊಗೆ ಆಡುವುದನ್ನು ನೋಡಿ ಇನ್ನಷ್ಟು ಜನ ಜಮಾಯಿಸಿದ್ದಾರೆ. ಆದರೆ, ಆ ಕ್ಷಣಕ್ಕೆ ಬೆಂಕಿ ಆರಿಸಲು ಸಾಧ್ಯವಾಗಿಲ್ಲ. ಬೆಂಕಿ ಇನ್ನಷ್ಟು ದೊಡ್ಡದಾದ ಕಾರಣ ಶಾಲೆಯಲ್ಲಿದ್ದ ಪೀಠೋಪಕರಣಗಳು ಸುಟ್ಟು ಕರಕಲಾಗಿದೆ.
ADVERTISEMENT
ಶಾಲೆಯ ವಿದ್ಯುತ್ ಸರ್ಕ್ಯೂಟ್ನಲ್ಲಿ ಉಂಟಾದ ದೋಷದಿಂದ ಈ ದುರಂತ ನಡೆದ ಬಗ್ಗೆ ಅಂದಾಜಿಸಲಾಗಿದೆ. ಬೆಂಕಿಯ ಜ್ವಾಲೆ ನೋಡಿ ಊರಿನವರಲ್ಲಿ ಆತಂಕ ಮೂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಅಗ್ನಿಯನ್ನು ಹತೋಟಿಗೆ ತಂದಿದ್ದಾರೆ. ಸತತ ಕಾರ್ಯಾಚರಣೆ ನಂತರ ಬೆಂಕಿಯನ್ನು ಸಂಪೂರ್ಣವಾಗಿ ಆರಿಸಿದ್ದಾರೆ. ಕಂದಾಯ, ಶಿಕ್ಷಣ ಅಧಿಕಾರಿಗಳ ಜೊತೆ ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
ದಸರಾ ರಜೆಯ ಬಳಿಕ ಶಾಲೆಗಳು ಪುನರಾರಂಭವಾಗಬೇಕಿದ್ದ ದಿನವೇ ಈ ಅವಘಡ ಸಂಭವಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬೆಂಕಿಯಿoದಾಗಿ ಶಾಲೆಯ ಕೊಠಡಿಗಳು, ಪೀಠೋಪಕರಣಗಳು, ಕಡತಗಳು ಹಾಗೂ ಶೈಕ್ಷಣಿಕ ಉಪಕರಣಗಳಿಗೆ ಹಾನಿಯಾಗಿದೆ.