ಶಿರಸಿ-ಹಾವೇರಿ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್’ಗೆ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಹಿಂದೆ ಕುಳಿತಿದ್ದ ಗಣೇಶ ಮೂಳೆ ಅವರು ಸಾವನಪ್ಪಿದ್ದಾರೆ. ಈ ಅಪಘಾತದಲ್ಲಿ ಗಣೇಶ ಮೂಳೆ ಅವರ ಮಗ ವಿಜಯ ಮೂಳೆ ಅವರಿಗೂ ಪೆಟ್ಟಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ನ ವಿಜಯ್ ಗಣೇಶ ಮೂಳೆ (34) ಅವರು ತಮ್ಮ ತಂದೆ ಗಣೇಶ ಮೂಳೆ ಅವರೊಂದಿಗೆ ಸ್ಕೂಟರಿನಲ್ಲಿ ಹೊರಟಿದ್ದರು. ಆ ಸ್ಕೂಟರ್ ದಾಸನಕೊಪ್ಪದ ಕಡೆ ಹೊರಟಿತ್ತು. ವಿಜಯ್ ಮೂಳೆ ಅವರು ಸ್ಕೂಟರ್ ಚಲಾಯಿಸುತ್ತಿದ್ದು, ಅವರ ತಂದೆ ಗಣೇಶ ಮೂಳೆ ಅವರು ಹಿಂಬದಿಯಲ್ಲಿ ಕುಳಿತಿದ್ದರು.
ಕಾಳಂಗಿ ಎಚ್ಪಿ ಗ್ಯಾಸ್ ಕ್ರಾಸ್ಸಿನಿಂದ ಸುಮಾರು 500 ಮೀಟರ್ ಹಿಂದೆ ಅವರ ಸ್ಕೂಟರಿಗೆ ಬೈಕು ಗುದ್ದಿತು. ಅದೇ ಮಾರ್ಗದಲ್ಲಿ ಹಾನಗಲ್ ಕಡೆಯಿಂದ ದಾಸನಕೊಪ್ಪದ ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆಯಿತು. ಆ ಬೈಕನ್ನು ಬನವಾಸಿಯ ಅಂಡಗಿಯ ಇಮಾಮ ಕಾಶೀಂ ಬಾಷಾಸಾಬ ಹಸ್ನಾಬಾದಿ ಅವರು ಓಡಿಸುತ್ತಿದ್ದರು. ಡಿಕ್ಕಿಯ ರಭಸಕ್ಕೆ ಸ್ಕೂಟರ್ನ ಹಿಂಬದಿಯಲ್ಲಿ ಕುಳಿತಿದ್ದ ಗಣೇಶ ಅವರು ರಸ್ತೆಗೆ ಬಿದ್ದಿದ್ದು, ಅವರ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಯಿತು. ಅಲ್ಲಿಯೇ ಅವರು ಸಾವನಪ್ಪಿದರು.
ಸ್ಕೂಟರ್ ಚಲಾಯಿಸುತ್ತಿದ್ದ ವಿಜಯ್ ಅವರು ಅಪಘಾತದ ವೇಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದರು. ಬೈಕ್ ಸವಾರ ಇಮಾಮ್ ಕಾಶೀಂ ಹಸ್ನಾಬಾದಿ (24) ಅಜಾಗರೂಕತೆಯಿಂದ ಈ ಅಪಘಾತ ನಡೆಯಿತು.