ಗೋಕರ್ಣದಲ್ಲಿ ಪೂಜೆ ಮಾಡಿಸಿಕೊಡುವುದಾಗಿ ಹೇಳಿದ ವ್ಯಕ್ತಿಯೊಬ್ಬರು ಪೂಜೆ ಮಾಡಿಸಿಕೊಡದೇ ಮೋಸ ಮಾಡಿದ್ದಾರೆ. ಪೂಜೆ ಮಾಡಿಸುವುದಕ್ಕಾಗಿ ದೂರದಿಂದ ಬಂದಿದ್ದ ಭಕ್ತರು ಅಪರಿಚಿತರ ಮಾತು ನಂಬಿ ಮೋಸ ಹೋಗಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿಯ ಸುಬ್ಬಯ್ಯ ಶೆಟ್ಟಿ ಎಂಬಾತರು ಈಚೆಗೆ ಮಂತ್ರಾಲಯಕ್ಕೆ ಹೋಗಿದ್ದರು. ಅಲ್ಲಿ ಅವರಿಗೆ ಅಜಯ್ ಕೌಶಿಕ್ ಎಂಬಾತರು ಪರಿಚಿತರಾಗಿದ್ದರು. `ಗೋಕರ್ಣದಲ್ಲಿ ಪೂಜೆ ಮಾಡಿಸಿಕೊಡುವೆ’ ಎಂದು ಅಜಯ್ ಕೌಶಿಕ್ ಅವರು ಸುಬ್ಬಯ್ಯ ಶೆಟ್ಟಿ ಅವರಿಗೆ ಹೇಳಿದ್ದರು. ಯಾವ ಯಾವ ಪೂಜೆಗೆ ಎಷ್ಟೇಷ್ಟು ಫೀ? ಎಂದು ವಿವರಿಸಿದ್ದರು. ಹಣಕಾಸು ವಿಷಯವನ್ನು ಸಹ ಮಾತನಾಡಿದ್ದರು. ಮುಂಗಡವಾಗಿ 10 ಸಾವಿರ ರೂ ಹಭವನ್ನುಪಡೆದಿದ್ದರು. ಅದಾದ ನಂತರ ಸುಬ್ಬಯ್ಯ ಶೆಟ್ಟಿ ಅವರು ಪೂಜೆ ಮಾಡಿಸಲು ಗೋಕರ್ಣಕ್ಕೆ ಬಂದಿದ್ದು, ಅಜಯ್ ಕೌಶಿಕ್ ಅವರು ಮೊದಲು ಫೋನ್ ರಿಸಿವ್ ಮಾಡಿದರು. ಅದಾದ ಕೊಠಡಿಯೊಂದರ ಬಗ್ಗೆ ಮಾಹಿತಿ ನೀಡಿ, ಅಲ್ಲಿ ತಂಗಲು ತಿಳಿಸಿದರು. ನಂತರ ಫೋನ್ ಸ್ವಿಚ್ ಆಫ್ ಮಾಡಿ ಯಾಮಾರಿಸಿದರು.
ಪಿತೃಪಕ್ಷದ ಹಿನ್ನಲೆ ಗೋಕರ್ಣದಲ್ಲಿ ಅಪರಕಾರ್ಯ ನೆರವೇರಿಸಲು ಸಾವಿರಾರು ಜನ ಬರುತ್ತಿದ್ದು, ಅಂಥವರನ್ನು ಗುರಿಯಾಗಿರಿಸಿಕೊಂಡು ಕೆಲವರು ಮೋಸ ಮಾಡುತ್ತಿದ್ದಾರೆ. `ಎಲ್ಲಾ ವ್ಯವಸ್ಥೆ ನಾನೇ ಮಾಡುತ್ತೇನೆ’ ಎಂದು ತಿಳಿಸಿ ಜನರನ್ನು ಯಾಮಾರಿಸುತ್ತಿದ್ದಾರೆ. `ದೂರದ ಊರಿನಿಂದ ಬಂದು ಪೂಜೆ ಮಾಡಲು ಸಾಧ್ಯವಾಗದ ಕಾರಣ ಮನಸ್ಸಿಗೆ ನೋವಾಗಿದೆ. ಮೋಸ ಮಾಡುವ ಅಜಯ ಕೌಶಿಕ್ ಅಂಥವರಿAದ ಗೋಕರ್ಣದ ಹೆಸರು ಹಾಳಾಗುತ್ತಿದೆ’ ಎಂದು ಸುಬ್ಬಯ್ಯ ಶೆಟ್ಟಿ ಅವರು ಹೇಳಿದರು.