ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಹಿನ್ನಲೆ ಉತ್ತರ ಕನ್ನಡದ ಐದು ಶಿಕ್ಷಣ ಸಂಸ್ಥೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆದೇಶಿಸಿದ್ದಾರೆ. ಜೊತೆಗೆ ಎಂಟು ಸರ್ಕಾರಿ ಕಚೇರಿಗಳಿಗೂ ಅವರು ರಜೆ ಘೋಷಿಸಿದ್ದಾರೆ.
ADVERTISEMENT
ಅಕ್ಟೊಬರ್ 23ರಂದು ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಮತದಾನ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮತಗಟ್ಟೆಗಳಿರುವ ಆಯ್ದ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಆ ದಿನ ರಜೆ ಘೋಷಿಸಲಾಗಿದೆ. ಚುನಾವಣಾ ಆಯೋಗದ ವೇಳಾಪಟ್ಟಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರ ನಿರ್ದೇಶನದಂತೆ ಈ ಆದೇಶ ಹೊರಡಿಸಲಾಗಿದೆ. ಮತಗಟ್ಟೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಮತದಾರರು ಮತ್ತು ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಮಾತ್ರ ಪ್ರವೇಶಾವಕಾಶ ಇರಲಿದೆ. ಹೀಗಾಗಿ, ಮತಗಟ್ಟೆ ಸ್ಥಾಪಿಸಿರುವ ಆಯ್ದ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಡಿ ರಜೆ ಘೋಷಿಸಲಾಗಿದೆ.
ADVERTISEMENT
ರಜೆ ಘೋಷಿಸಿರುವ ಶಾಲಾ-ಕಾಲೇಜುಗಳಲ್ಲಿ ಕಾರವಾರದ ಸರ್ಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಕುನ್ನಿಪೇಟೆ ಮತ್ತು ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆ, ಶಿರಸಿಯ ಶ್ರೀ ಮಾರಿಕಾಂಬಾ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಹಾಗೂ ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಂದಾನೆ (ಗುಬ್ಬಗೋಡು) ಮತ್ತು ದಾಂಡೇಲಿಯ ಕೆ.ಎಚ್.ಇ.ಪಿ. ಪ್ರೌಢಶಾಲೆ, ಅಂಬಿಕಾನಗರ ಸೇರಿವೆ.
✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
ಇನ್ನು ಸರ್ಕಾರಿ ಕಚೇರಿಗಳ ಪೈಕಿ ಅಂಕೋಲಾ ಮತ್ತು ಕುಮಟಾ ತಹಶೀಲ್ದಾರ್ ಕಚೇರಿಗಳು, ಕುಮಟಾ ತಾಲೂಕಿನ ಗೋಕರ್ಣ ನಾಡಕಚೇರಿ, ಹೊನ್ನಾವರ ತಹಶೀಲ್ದಾರ್ ಕಚೇರಿ ಮತ್ತು ಹರಂಗಡಿ ಗ್ರಾಮ ಪಂಚಾಯಿತಿ ಕಚೇರಿ, ಭಟ್ಕಳ ತಹಶೀಲ್ದಾರ್ ಕಚೇರಿ, ಸಿದ್ದಾಪುರ ತಹಶೀಲ್ದಾರ್ ಕಚೇರಿ ಹಾಗೂ ಉಂಬಳೆಮನೆ, ಹೇರೂರು ನಾಡಕಚೇರಿ, ಯಲ್ಲಾಪುರ ತಹಶೀಲ್ದಾರ್ ಕಚೇರಿ ಮತ್ತು ಮಂಚಿಕೇರಿ ನಾಡಕಚೇರಿ, ಮುಂಡಗೋಡ ಹಾಗೂ ಹಳಿಯಾಳ ತಹಶೀಲ್ದಾರ್ ಕಚೇರಿಗಳು, ದಾಂಡೇಲಿ ತಾಲೂಕು ಆಡಳಿತ ಸೌಧ ಮತ್ತು ಜೋಯಿಡಾ ತಹಶೀಲ್ದಾರ್ ಕಚೇರಿ ಹಾಗೂ ರಾಮನಗರದ ಗ್ರಾಮ ಆಡಳಿತಾಧಿಕಾರಿ ಕಚೇರಿಗಳಿಗೆ ಅಕ್ಟೋಬರ್ 23ರಂದು ರಜೆ ಘೋಷಿಸಲಾಗಿದೆ.