ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ನ ಹಣಕಾಸು ವಿಭಾಗದ ನಿರ್ದೇಶಕಿಯಾಗಿ ಕವಿತಾ ರಾಕೇಶ್ ಸ್ವಾತಿ ಅವರು ಅಧಿಕಾರವಹಿಸಿಕೊಂಡಿದ್ದಾರೆ. ಕವಿತಾ ರಾಕೇಶ್ ಅವರು ಚಾರ್ಟರ್ಡ್ ಅಕೌಂಟೆoಟ್ ಆಗಿದ್ದು, ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದಿಂದ ಜಾಗತಿಕ ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಪಡೆದವರಾಗಿದ್ದಾರೆ. ಅಲ್ಲದೆ, ಬ್ರಿಟನ್ನ ಎಸಿಸಿಎ ಸಂಸ್ಥೆಯಿoದ ಅಂತಾರಾಷ್ಟ್ರೀಯ ಹಣಕಾಸು ವರದಿಗಾರಿಕೆಯಲ್ಲಿ ಡಿಪ್ಲೊಮಾ ಮಾಡಿದ್ದಾರೆ.
ಖಾಸಗಿ ಹಾಗೂ ಅರೆ ಸರ್ಕಾರಿ ವಲಯಗಳಲ್ಲಿ ಹಣಕಾಸು, ಲೆಕ್ಕಪತ್ರ ಮತ್ತು ವಾಣಿಜ್ಯ ಕಾರ್ಯಾಚರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ 24 ವರ್ಷಗಳ ಅನುಭವ ಅವರಿಗಿದೆ. ವ್ಯವಹಾರ ಪರಿವರ್ತನೆ, ಬಿಪಿಒ ಕಾರ್ಯಚಟುವಟಿಕೆಗಳ ವರ್ಗಾವಣೆ, ಹಣಕಾಸು ವರದಿಗಳ ಸಿದ್ಧತೆ, ಆಂತರಿಕ ಹಣಕಾಸು ನಿಯಂತ್ರಣದ ಬಗ್ಗೆ ಅವರು ಪರಿಣಿತಿಪಡೆದಿದ್ದಾರೆ. ಗುತ್ತಿಗೆ ನಿರ್ವಹಣೆ, ಹಣಕಾಸು ವಿಶ್ಲೇಷಣೆ, ಪ್ರಕ್ರಿಯೆಗಳ ಸುಧಾರಣೆ, ನೂತನ ವ್ಯವಸ್ಥೆಗಳ ಅನುಷ್ಠಾನ, ಹಣಕಾಸು ಯೋಜನೆ ಮತ್ತು ಬಜೆಟ್ ರೂಪಿಸುವಿಕೆ, ಅಪಾಯ ನಿರ್ವಹಣೆ, ನಿಧಿ ನಿರ್ವಹಣೆ, ಖಜಾನೆ ಕಾರ್ಯಾಚರಣೆಯನ್ನು ನಡೆಸಲಿದ್ದಾರೆ. ತೆರಿಗೆ, ಲೆಕ್ಕಪರಿಶೋಧನೆ, ನಿಯಮಾನುಸರಣೆ, ಆಡಳಿತ ನಿರ್ವಹಣೆ, ಕಾರ್ಯತಂತ್ರದ ನಿರ್ಧಾರ ಕೈಗೊಳ್ಳುವಿಕೆ, ವ್ಯವಹಾರ ವಿಶ್ಲೇಷಣೆ, ಕಾರ್ಪೊರೇಟ್ ಹಣಕಾಸು, ಹಣಕಾಸು ಮಾದರಿಗಳ ರೂಪಿಸುವಿಕೆ ಹಾಗೂ ವ್ಯವಹಾರ ಸಲಹಾ ಕಾರ್ಯಗಳಲ್ಲಿ ಪರಿಣತಿಹೊಂದಿದ್ದಾರೆ.
ವಿವಿಧ ಹುದ್ದೆಗಳಲ್ಲಿನ ಅನುಭವದ ಮೂಲಕ ಅವರು ಹಣಕಾಸು ನಿರ್ವಹಣೆ, ಕಾರ್ಯತಂತ್ರದ ಯೋಜನೆ, ವಾಣಿಜ್ಯ ಕಾರ್ಯಾಚರಣೆ, ಹಣಕಾಸು ವರದಿಗಾರಿಕೆ ಮತ್ತು ಸಾಂಸ್ಥಿಕ ಆಡಳಿತ ಕ್ಷೇತ್ರಗಳಲ್ಲಿ ವ್ಯಾಪಕ ಪರಿಣತಿಗಳಿಸಿದ್ದಾರೆ. ಈ ಕುರಿತು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಶೀಲ್ ಬಿ ನಾರ್ಕರ್ ಅವರು ಮಾಹಿತಿ ನೀಡಿದ್ದಾರೆ.