ಕಾಳಂಗಿ ಸೊಸೈಟಿಯಲ್ಲಿ 1.50 ಲಕ್ಷ ರೂ ಸಾಲ ಮಾಡಿದ್ದ ಚಂದನ ಕ್ಯಾತಣ್ಣನವರ್ ಅವರು ಆ ಸಾಲ ತೀರಿಸಲು ದಾಸನಕೊಪ್ಪದ ಓವರಸಿಸ್ ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು ಮತ್ತೊಂದು ಸಾಲ ಮಾಡಿದ್ದದ್ದು, ಸಾಲದ ಸುಳಿಗೆ ಸಿಲುಕಿ ಅವರು ಸಾವನಪ್ಪಿದ್ದಾರೆ.
ಶಿರಸಿ ಬನವಾಸಿ ಬಳಿಯ ಬದನಗೋಡು ರಂಗಾಪುರದಲ್ಲಿ ಚಂದನ ಕ್ಯಾತಣ್ಣನವರ್ ಅವರು ವಾಸವಾಗಿದ್ದರು. 27 ವರ್ಷದ ಅವರು ಕೃಷಿಕರಾಗಿ ಬದುಕು ಕಟ್ಟಿಕೊಂಡಿದ್ದರು. ತಮ್ಮ ಭೂಮಿಯಲ್ಲಿ ಅವರು ಅಡಿಕೆ ಹಾಗೂ ಭತ್ತ ಬೆಳೆದಿದ್ದರು. ಇದಕ್ಕಾಗಿ ಅವರು ಕಾಳಂಗಿ ಸೊಸೈಟಿಯಲ್ಲಿ 1.5 ಲಕ್ಷ ರೂ ಸಾಲ ಮಾಡಿದ್ದರು. ಆ ಸಾಲ ತೀರಿಸಲು ದಾಸನಕೊಪ್ಪದ ಓವರಸಿಸ್ ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು ಇನ್ನಷ್ಟು ಸಾಲ ತೆಗೆದಿದ್ದರು. ಮೂರು ದಿನದ ಹಿಂದೆ ಆ ಸಾಲದ ಬಗ್ಗೆ ಕುಬೇರ ಕ್ಯಾತಣ್ಣನವರ್ ಅವರು ಸಾಲದ ಬಗ್ಗೆ ಮಗನಲ್ಲಿ ಪ್ರಶ್ನಿಸಿದ್ದರು. `ಆ ಸಾಲ ತೀರಿಸೋಣ’ ಎಂದು ಚಂದನ ಕ್ಯಾತಣ್ಣನವರ್ ಅವರು ಹೇಳಿದ್ದರು.
ಅಕ್ಟೊಬರ್ 17ರಂದು ದುಡಿಮೆ ಮುಗಿಸಿ ಮನೆಗೆ ಬಂದ ಚಂದನ ಕ್ಯಾತಣ್ಣನವರ್ ಅವರು ದೇಗುಲದ ಬಳಿ ಹೋದರು. ಆ ದಿನ ರಾತ್ರಿ ಆದರೂ ಅವರು ಮನೆಗೆ ಬಂದಿರಲಿಲ್ಲ. ಫೋನ್ ಮಾಡಿದಾಗ ಸ್ವಿಚ್ ಆಫ್ ಬಂದಿತು. ಅಕ್ಟೊಬರ್ 18ರ ಬೆಳಗ್ಗೆ ಕುಬೇರ ಕ್ಯಾತಣ್ಣನವರ್ ಅವರು ಹುಲ್ಲು ಹೊಡೆಯುವುದಕ್ಕಾಗಿ ಕೆರೆ ಬಳಿ ಹೋಗಿದ್ದರು. ಆ ಕೆರೆಯಲ್ಲಿ ಚಂದನ ಕ್ಯಾತಣ್ಣನವರ್ ಅವರ ಶವ ಕಾಣಿಸಿತು. ಮಾಡಿದ ಸಾಲ ತೀರಿಸಲಾಗದೇ ಚಂದನ ಕ್ಯಾತಣ್ಣನವರ್ ಅವರು ಆತ್ಮಹತ್ಯೆಗೆ ಶರಣಾಗಿರುವುದು ಅರಿವಾಯಿತು.