ಸಿವಿಲ್ ಇಂಜಿನಿಯರ್ ಪರಶುರಾಮ ಗುಡಿಗಾರ್ ಅವರ ಒಡೆತನದಲ್ಲಿದ್ದ ಆಸ್ತಿಯ ಮಾಲಕತ್ವ ಬದಲಾಗಿದ್ದು, ನಕಲಿ ದಾಖಲೆಯಿಂದ ಆಸ್ತಿ ಹಕ್ಕು ಬದಲಾದ ಬಗ್ಗೆ ಅವರು ಪೊಲೀಸರಿಗೆ ದೂರಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ADVERTISEMENT
ಶಿರಸಿ ವಿವೇಕಾನಂದ ನಗರದ ಬಳಿಯ ಮರಾಠಿಕೊಪ್ಪದಲ್ಲಿ ಪರಶುರಾಮ ನಾಗೇಶ ಗುಡಿಗಾರ್ ಅವರು ವಾಸವಾಗಿದ್ದಾರೆ. ಸಿವಿಲ್ ಇಂಜಿನಿಯರ್ ಆಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಪರಶುರಾಮ ಗುಡಿಗಾರ್ ಹಾಗೂ ಅವರ ಸಹೋದರಿ ಪುಷ್ಪಾ ಅವರ ಹೆಸರಿನಲ್ಲಿ ಹುಬ್ಬಳ್ಳಿ-ಶಿರಸಿ ಹೆದ್ದಾರಿ ಬದಿಗೆ ಆಸ್ತಿಯಿದೆ. ಲಂಡಕನಳ್ಳಿಯ ಸರ್ವೇ ನಂ 45ಬ ಅವರ ಒಡೆತನದಲ್ಲಿದ್ದು, ನಗರಸಭೆ ದಾಖಲೆಗಳ ಪ್ರಕಾರ ಈ ವಸತಿ ನಿವೇಶನ ಏಕಾಏಕಿ ಶಾಂತಿ ನಗರದ ಜನೀತ್ ರಫೀಕ್ ಬೇಸಾನಿಯಾ ಎಂಬ ವೃದ್ಧೆಯ ಹೆಸರಿಗೆ ಬದಲಾಗಿದೆ. ನಕಲಿ ದಾಖಲೆಗಳನ್ನು ನೈಜ ಎಂದು ಬಿಂಬಿಸಿ ಆ ಆಸ್ತಿಯ ಹಕ್ಕು ಬದಲಿಸಲಾಗಿದೆ ಎಂದವರು ದೂರಿದ್ದಾರೆ. ಶಿರಸಿ ನಗರಸಭೆಯೂ ಜನೀತ್ ರಫೀಕ್ ಬೇಸಾನಿಯಾ ಅವರ ಹೆಸರಿಗೆ ಪಾರಂ ನಂ – 3ನ್ನು ವಿತರಿಸಿದ ಬಗ್ಗೆ ಅವರು ವಿವರಿಸಿದ್ದಾರೆ.
ADVERTISEMENT
ಹುಬ್ಬಳ್ಳಿ ರಸ್ತೆ ಶಾಂತಿ ನಗರದ ಮದೀನಾ ಮಂಜಿಲ್ ಬಳಿ ಜನೀತ್ ರಫೀಕ್ ಬೇಸಾನಿಯಾ ಅವರು ವಾಸವಾಗಿದ್ದಾರೆ. 70 ವರ್ಷದ ಅವರು ತಮ್ಮ ಮನೆ ಮುಂದಿನ ತೆಂಗಿನ ಮರಗಳಿರುವ ಜಾಗದ ಫೋಟೋವನ್ನು ನಗರಸಭೆಗೆ ನೀಡಿ, ಪರಶುರಾಮ ಗುಡಿಗಾರ್ ಅವರ ಕುಟುಂಬದ ಆಸ್ತಿ ಲಪಟಾಯಿಸಲು ಮುಂದಾಗಿದ್ದಾರೆ. ಅವರ ಜೊತೆ ಇನ್ನೂ ನಾಲ್ವರು ಈ ಆಸ್ತಿಹೊಡೆಯುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಬೇರೆ ಯಾವುದೋ ಜಾಗದ ಫೋಟೋ – ಇನ್ಯಾವುದೋ ನಕಲಿ ದಾಖಲೆಗಳನ್ನು ನೀಡಿದರೂ ನಗರಸಭೆ ಅಧಿಕಾರಿಗಳು ಅದರ ಸತ್ಯಾಸತ್ಯತೆ ಪರಿಶೀಲಿಸದೇ ಸಹಿ ಹಾಕಿದ್ದಾರೆ. `ಆ ಜಾಗವನ್ನು ನಾನು ಖರೀದಿಸಿದ್ದೇನೆ’ ಎಂದು ಜನೀತ್ ರಫೀಕ್ ಬೇಸಾನಿಯಾ ಅವರು ಹೇಳಿಕೊಳ್ಳುತ್ತಿದ್ದಾರೆ.
✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT
ಎರಡುವರೆ ತಿಂಗಳ ಹಿಂದೆ ಪರಶುರಾಮ ಗುಡಿಗಾರ್ ಅವರು ತಮ್ಮ ಜಮೀನಿಗೆ ಹೋಗಿದ್ದಾರೆ. ಪಾಳು ಬಿದ್ದ ಆ ಕ್ಷೇತ್ರದಲ್ಲಿ ಗಿಡ-ಗಂಟಿ ಬೆಳೆದಿದ್ದು, ಅದನ್ನು ಸ್ವಚ್ಚ ಮಾಡಲು ಮುಂದಾಗಿದ್ದಾರೆ. ಆ ವೇಳೆ ಜನೀತ್ ರಫೀಕ್ ಬೇಸಾನಿಯಾ ಅವರು ಆಗಮಿಸಿ, `ಈ ಜಮೀನು ನನ್ನದು’ ಎಂದು ಜಗಳ ಶುರು ಮಾಡಿದ್ದಾರೆ. ದಾಖಲೆಗಾಗಿ ನಗರಸಭೆ ನೀಡಿದ ನಮೂನೆ-3ರ ಪ್ರತಿ ಒದಗಿಸಿದ್ದಾರೆ. ಇದರಿಂದ ಕಂಗಾಲಾದ ಪರಶುರಾಮ ಗುಡಿಗಾರ್ ಅವರು ವೆಬ್ಸೈಟಿನಲ್ಲಿ ದಾಖಲೆ ಹುಡುಕಾಟ ಮಾಡಿದ್ದು, ಅವರಿಗೆ ಅರಿವಿಲ್ಲದೇ ಹಕ್ಕು ಬದಲಾವಣೆಯಾಗಿರುವುದು ಕಾಣಿಸಿದೆ. ಶೋಧ ನಡೆಸಿದಾಗ ದಾಖಲೆ ತಿದ್ದುಪಡಿ ಮಾಡಿರುವುದು ಹಾಗೂ ಬೇರೆ ಜಾಗದ ಚಿತ್ರವನ್ನು ಅಂಟಿಸಿ ಈ ಜಾಗದ ನಮೂನೆ-3ಪಡೆದಿರುವುದು ಗೊತ್ತಾಗಿದೆ. ನಗರಸಭೆ ಕಡತದಲ್ಲಿಯೂ ಈ ನಕಲಿ ದಾಖಲೆಯೇ ಅಸಲಿ ಎಂದು ಬಿಂಬಿಸಿರುವುದು ಅವರ ಗಮನಕ್ಕೆ ಬಂದಿದೆ.
ತಮ್ಮ ಆಸ್ತಿಹೊಡೆಯಲು ಸಂಚು ರೂಪಿಸಿದವರ ವಿರುದ್ಧ ಪರಶುರಾಮ ಗುಡಿಗಾರ ಅವರು ಸಮರ ಸಾರಿದ್ದಾರೆ. ಈ ಕುರಿತು ನ್ಯಾಯ ಕೋರಿ ಅವರು ಕಾನೂನು ಹೋರಾಟ ನಡೆಸಿದ್ದಾರೆ. ಪೊಲೀಸರು ಈ ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಿದ್ದಾರೆ.