ಹಾರವಾಡ ಸೀಬರ್ಡ ಕಾಲೋನಿಯ ಬಂ ಬಂ ಬೋಲೆನಾಥ್ ಕೃಷ್ಣ ಭಕ್ತ ಮಂಡಳಿಯವರು ಅದ್ಧೂರಿಯಾಗಿ ರಸ ಮಂಜರಿ ಕಾರ್ಯಕ್ರಮ ಮಾಡಿದ್ದಾರೆ. ಭಟ್ಕಳದ ಪ್ರೆಂಡ್ಸ್ ಮೆಲೋಡಿ ತಂಡದವರನ್ನು ಕರೆಯಿಸಿ ಗಾಯನ ಏರ್ಪಡಿಸಿದ್ದಾರೆ.
ಈ ಕಾರ್ಯಕ್ರಮವನ್ನ ಅಂಕೋಲಾ ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮು ಅಗ್ನಿ ಉದ್ಘಾಟಿಸಿದರು. ಇದಾದ ನಂತರ ಮಾತನಾಡಿದ ಅವರು `ಹಾರವಾಡದಂಥಹ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಲಾಗಿದೆ. ಇಂಥ ಕಾರ್ಯಕ್ರಮಗಳಿಂದಲೇ ಪ್ರತಿಭಾನ್ವಿತರಿಗೆ ಸೂಕ್ತ ವೇದಿಕೆ ಸಿಗುತ್ತಿದೆ. ಸಂಘಟಕರ ಉತ್ಸಾಹ ಸದಾ ಹೀಗೆ ಇರಲಿ’ ಎಂದು ಹಾರೈಸಿದರು. `ಭವಿಷ್ಯದಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಗೌರವಿಸುವ ಸಂಪ್ರದಾಯ ಬೆಳಯಲಿ. ಆಗ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುವಂತಾಗುತ್ತದೆ’ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ್ ಜಿ ಅರ್ಗೇಕರ್ ಮಾತನಾಡಿ `ಕನ್ನಡ ಭಾಷೆ ಉಳಿಯಬೇಕು ಎಂಬ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಪಾಠ ಮಾಡುವ ಶಿಕ್ಷಕರ ಸೇವೆ ಸದಾ ಸ್ಮರಣೀಯವಾಗಿದ್ದು, ಅಂಥವರನ್ನು ಗುರುತಿಸಿ ಸನ್ಮಾನಿಸಿರುವುದು ಖುಷಿ ತಂದಿದೆ. ಜೀವನದಲ್ಲಿ ಶಿಕ್ಷಣ ಕಲಿಸಿದ ಗುರುಗಳ ಆದರ್ಶವನ್ನು ಯಾರೂ ಮರೆಯಬಾರದು’ ಎಂದು ಹೇಳಿದರು. ಶಾಲಾ ಶಿಕ್ಷಕರಾದ ವೆಂಕಮ್ಮ ನಾಯಕ, ರಂಜನಾ ನಾಯಕ, ರಾಜೇಶ್ವರಿ ಹೆಗಡೆ, ಸಂಗೀತ ಐಗಳ, ಜಯಂತಿ ನಾಯಕ, ಸರಿತಾ ಅಡಿಗೋಣ, ಜಯಂತಿ ನಾಯಕ, ಸುಮಂಗಲಾ ನಾಯಕ ಅವರು ಸನ್ಮಾನ ಸ್ವೀಕರಿಸಿದರು. ಸೀಬರ್ಡ್ ಕಾಲೋನಿಯ ಸರಕಾರಿ ವೀಣಾ ನಾಯ್ಕ ಹಾಗೂ ಹಿರಿಯ ಪಾರ್ಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆ ಶಿಕ್ಷಕಿಯರನ್ನು ಈ ವೇಳೆ ಸನ್ಮಾನಿಸಲಾಯಿತು.