ಕಾರವಾರದ ರೋಹನ ನಾಯ್ಕ ಅವರ ಜೊತೆ ಅಂಕೋಲಾ ಹಾರವಾಡದ ಗಜಾನನ ಗೌಡ, ಸಂಜಯ ಅರ್ಗೇಕರ್ ಹಾಗೂ ರಾಜೇಂದ್ರ ಪುತ್ತು ಪೆಡ್ನೇಕರ್ ಸೇರಿ ಹಾರವಾಡ ಗಜನಿ ಪ್ರದೇಶವನ್ನು ಹಾಳು ಮಾಡಿದ್ದಾರೆ. ಸೀ ಬರ್ಡ ಒಳ ಭಾಗದ ತ್ಯಾಜ್ಯವನ್ನು ಅವರು ಗಜನಿ ನೀರಿಗೆ ಸುರಿಯುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ.
ಅoಕೋಲಾದ ಹಾರವಾಡದ ಬಳಿ ಗಜನಿ ಭೂಮಿಯಿದ್ದು, ಅಲ್ಲಿನ ತಿಂಗಳ ಹಿಂದೆ ಅಲ್ಲಿನ ನೀರು ಶುದ್ಧವಾಗಿತ್ತು. ಆದರೆ, ಕಾರವಾರದ ರೋಹನ ನಾಯ್ಕ ಅವರ ಜೊತೆ ಅಂಕೋಲಾ ಹಾರವಾಡದ ಗಜಾನನ ಗೌಡ, ಸಂಜಯ ಅರ್ಗೇಕರ್ ಹಾಗೂ ರಾಜೇಂದ್ರ ಪುತ್ತು ಪೆಡ್ನೇಕರ್ ಸೇರಿ ಅಲ್ಲಿ ತ್ಯಾಜ್ಯ ಎಸೆಯಲು ಶುರು ಮಾಡಿದರು. ಸೀಬರ್ಡ ಒಳಗಿನ ಗಲೀಜನ್ನು ಗೋವಾ ನೋಂದಣಿಯ ಲಾರಿಯಲ್ಲಿ ತರುವ ಅವರು ಅದನ್ನು ಗಜನಿ ನೀರಿಗೆ ಬಿಡುತ್ತಿದ್ದರು. ಕಳೆದ ಒಂದು ತಿಂಗಳಿನಿAದ ಆ ನಾಲ್ವರು ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಪರಿಸರ ಹಾಳಾಗುವ ಬಗ್ಗೆ ಅರಿವಿದ್ದರೂ ಅದನ್ನು ಮುಂದುವರೆಸಿದ್ದರು.
ಸೀಬರ್ಡ್ನಿAದ ಸಂಗ್ರಹಿಸಿದ ಕಸವನ್ನು ವಾಹನದಲ್ಲಿ ತಂದು ಹಾರವಾಡದ ಗಜನಿ ಪ್ರದೇಶದಲ್ಲಿ ಸುರಿಯುತ್ತಿರುವ ಬಗ್ಗೆ ಹಾರವಾಡ ಗ್ರಾಮ ಪಂಚಾಯತಗೆ ಮಾಹಿತಿ ಬಂದಿತು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಗೌಡ ಅವರು ಸ್ಥಳ ಭೇಟಿ ಮಾಡಿದರು. ನೀರನ್ನು ಮಲೀನಗೊಳಿಸಿ ಪರಿಸರಕ್ಕೆ ಹಾನಿ ಮಾಡಿರುವ ರೋಹನ ನಾಯ್ಕ ಹಾಗೂಗಜಾನನ ಗೌಡ, ಸಂಜಯ ಅರ್ಗೇಕರ ಮತ್ತು ರಾಜೇಂದ್ರ ಪುತ್ತು ಪೆಡ್ನೇಕರ ಅವರ ವಿರುದ್ಧ ಅವರು ಕೇಸು ದಾಖಲಿಸಿದರು. ಕಳೆದ ಒಂದು ತಿಂಗಳಿoದ ಹಾರವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಜನಿ ಪ್ರದೇಶದಲ್ಲಿ ಸುರಿಯುತ್ತಿದ್ದ ಬಗ್ಗೆ ವಿವರಿಸಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.