ಮೈನುದ್ದೀನ್ ಸ್ಟ್ರೀಟ್ನ ತೌಶಿಫ್ ಸಾಹೇಬ್ ಅವರ ಜಾಗದಲ್ಲಿ ಎಂಟು ದನಗಳನ್ನು ಕಟ್ಟಲಾಗಿದ್ದು, ನೀರು-ಆಹಾರವಿಲ್ಲದೇ ಒಂದು ಎತ್ತು ಸಾವನಪ್ಪಿದೆ. ಅಲ್ಲಿ ದಾಳಿ ಮಾಡಿದ ಪೊಲೀಸರು ಏಳು ಜಾನುವಾರುಗಳನ್ನು ತಮ್ಮ ವಶಕ್ಕೆಪಡೆದು, ಅವುಗಳ ಆರೈಕೆ ಮಾಡಿದ್ದಾರೆ.
ಮೈನುದ್ದೀನ್ ಸ್ಟ್ರೀಟ್ನ ಬ್ಲಾಕ್ ಬಿ, 2ನೇ ಕ್ರಾಸ್ನಲ್ಲಿರುವ ತೆಂಗಿನ ಮರಗಳಿಗೆ ಎಂಟು ಜಾನುವಾರುಗಳನ್ನು ಕಟ್ಟಲಾಗಿತ್ತು. ಅವುಗಳಿಗೆ ನೀರು-ಆಹಾರ ನೀಡದೇ ಹಿಂಸಿಸುತ್ತಿರುವ ಬಗ್ಗೆ ಪೊಲೀಸರಿಗೆ ಫೋನ್ ಬಂದಿತು. ಈ ಹಿನ್ನಲೆ ಪಿಎಸ್ಐ ತಿಮ್ಮಪ್ಪ ಅವರು ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದರು. ಅಷ್ಟರೊಳಗೆ ಒಂದು ಎತ್ತು ಸಾವನಪ್ಪಿದ್ದು, ಉಳಿದವುಗಳಿಗೆ ಪೊಲೀಸರೇ ನೀರು-ಮೇವು ಒದಗಿಸಿದರು. ಅದಾದ ನಂತರ ತೌಶಿಫ್ ಮಹಮ್ಮದ್ ಖಾಸಿಂ ಸಾಹೇಬ್ ಅವರ ಜಾಗದಲ್ಲಿದ್ದ ಎಲ್ಲಾ ಜಾನುವಾರುಗಳನ್ನು ಅವರು ತಮ್ಮ ವಶಕ್ಕೆಪಡೆದರು.
ಈ ಜಾನುವಾರುಗಳ ಅಂದಾಜು ಮೌಲ್ಯ 89 ಸಾವಿರ ರೂ ಆಗಿದೆ. ಜಾನುವಾರುಗಳ ಜೊತೆ ಅದಕ್ಕೆ ಕಟ್ಟಿದ್ದ ಹಗ್ಗವನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅಡಿ ಪ್ರಾಣಿ ಹಿಂಸೆ ನೀಡಿದವರ ವಿರುದ್ಧ ಕೇಸು ಹಾಕಿದ್ದಾರೆ. ಇನ್ನೂ ಅನೇಕ ಆರೋಪಿತರು ಈ ಪ್ರಕರಣದಲ್ಲಿ ಭಾಗಿಯಾದ ಸಾಧ್ಯತೆಯಿದ್ದು, ಅವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಪೊಲೀಸರು ಹೇಳಿದ್ದಾರೆ.