ದಾಂಡೇಲಿಯ ಮಲ್ಲಿಕ್ ರೆಹಾನ್ ಮಕಾನದರ್ ಹಾಗೂ ಸೌರಬ್ ಎಂಬಾತರು ಹಳಿಯಾಳದ ಹಳಿಯಾಳದ ನವಾಫ್ ಮುಲ್ಲಾ ಮತ್ತು ಸದಾಪ್ ಪಿರವಾಲೆ ಜೊತೆ ಸೇರಿ ಭರ್ಜರಿ ಹುಟ್ಟುಹಬ್ಬದ ಆಚರಣೆ ಮಾಡಿದ್ದಾರೆ. ಇನ್ನೂ ನಾಲ್ವರ ಜೊತೆ ಅವರು ಲಾಂಗು-ಮಚ್ಚುಗಳನ್ನು ಪ್ರದರ್ಶಿಸಿ ಕೇಕ್ ಕತ್ತರಿಸಿದ್ದಾರೆ. ಆ ಎಲ್ಲರೂ ಕೈಯಲ್ಲಿ ಸರಾಯಿ ಬಾಟಲಿ ಹಿಡಿದು ಮಾರಕಾಸ್ತçಗಳ ಪ್ರದರ್ಶನ ಮಾಡಿ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸಾರ್ವಜನಿಕ ಪ್ರದೇಶದಲ್ಲಿ ಅಶಾಂತಿ ಸೃಷ್ಠಿಸಿದ ಆ ಎಲ್ಲರ ವಿರುದ್ಧ ಹಳಿಯಾಳ ಪೊಲೀಸರು ಕೇಸು ಹಾಕಿದ್ದಾರೆ. ನವೆಂಬರ್ 24ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ ಪೊಲೀಸರು ವಿಚಾರಣೆ ನಡೆಸಿದ್ದು, ಆ ವಿಡಿಯೋದಲ್ಲಿದ್ದವರನ್ನು ಗುರುತಿಸಿದ್ದಾರೆ. ದಾಂಡೇಲಿಯ ಮಲ್ಲಿಕ್ ರೆಹಾನ್ ಮಕಾನದರ್, ಸೌರಬ್, ಹಳಿಯಾಳದ ಹಳಿಯಾಳದ ನವಾಫ್ ಮುಲ್ಲಾ ಮತ್ತು ಸದಾಪ್ ಪಿರವಾಲೆ ಅವರು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಇನ್ನೂ ನಾಲ್ವರು ಈ ಮಾರಕಾಸ್ತç ಪ್ರದರ್ಶನದಲ್ಲಿ ಭಾಗಿಯಾಗಿದ್ದು, ಅವರ ಹುಡುಕಾಟವೂ ನಡೆದಿದೆ.
ಹರಿತವಾದ ಲಾಂಗ್ ಬಳಸಿ ಅದರ ಮೂಲಕವೇ ಈ ಪುಂಡರು ಕೇಕ್ ಕತ್ತರಿಸಿದ್ದಾರೆ. ಅದಾದ ನಂತರ ಕೈಯಲ್ಲಿ ಸರಾಯಿ ಬಾಟಲಿ ಹಿಡಿದು ಕುಡಿಯುತ್ತಲೇ ಕುಣಿದು ಕುಪ್ಪಳಿಸಿದ್ದಾರೆ. ಕಾರ್ ಒಂದರ ಮೇಲೆ ಅವರು ಕೇಕ್ ಕತ್ತರಿಸಿ, ಅಲ್ಲಿ ಅಸಭ್ಯವಾಗಿ ವರ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸಾರ್ವಜನಿಕರು ಇಂಥ ದೃಶ್ಯ ವೀಕ್ಷಣೆ ಮಾಡಿದ್ದರಿಂದ ಶಾಂತಿ ಹಾಗೂ ಸುವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀಳಲಿದ್ದು, ಅದೇ ಹಿನ್ನಲೆ ಪೊಲೀಸರು ಕ್ರಮ ಜರುಗಿಸಿದ್ದಾರೆ. ಹಳಿಯಾಳ ಪಿಸೈ ಕಿರಣ ಪಾಟೀಲ್ ಅವರು ಆ ಪುಂಡರ ವಿರುದ್ಧ ಸುಮಟೋ ಪ್ರಕರಣ ದಾಖಲಿಸಿದ್ದಾರೆ.