ಕಾರವಾರ ಬಾಡ ಗ್ರಾಮದ ಮಹಾದೇವರ ಜಾತ್ರಾ ಮಹೋತ್ಸವವು ನವೆಂಬರ್ 24 ಮತ್ತು 25ರಂದು ನಡೆಯಲಿದೆ. ಮೊದಲ ದಿನವಾದ ಮಂಗಳವಾರ ಬೆಳಗ್ಗೆ 7ಗಂಟೆಗೆ ಅಭಿಷೇಕ, ನಂತರ ತುಲಾಭಾರ ಹಾಗೂ ಪೂಜಾ ಕಾರ್ಯಕ್ರಮ ಜರುಗಲಿದೆ.
ಮಂಗಳವಾರ ಸಂಜೆ ಹಬ್ಬುವಾಡದ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಪೂಜೆಯ ಬಳಿಕ 6 ಗಂಟೆಗೆ ವನಭೋಜನ ನಡೆಯಲಿದ್ದು, ನಂತರ ದೇವರ ಪಲ್ಲಕ್ಕಿಯು ಐದು ದೇವರ ಕಟ್ಟೆ ತಿರುಗಲಿದೆ. ರಾತ್ರಿ 9 ಗಂಟೆಗೆ ಗಣಪತಿ ದೇವಸ್ಥಾನದಿಂದ ಹೊರಡುವ ದೇವರ ರಥವು ಕಾರವಾರ ಮರ್ಗವಾಗಿ ಭಕ್ತರ ಆರತಿ ಸ್ವೀಕರಿಸುತ್ತಾ ಬೆಳಗಿನ ಜಾವ 3ಕ್ಕೆ ಮಹಾದೇವ ದೇವಸ್ಥಾನ ತಲುಪಲಿದೆ.
ಎರಡನೇ ದಿನವಾದ ಬುಧವಾರ ಮಧ್ಯಾಹ್ನ 3ಗಂಟೆಗೆ ಕೋಡಿಬಾಗದ ಭಕ್ತವೃಂದದಿಂದ ಕೋಲಾಟ ಮತ್ತು ದೇವಳಿ ಸಮಾಜದವರಿಂದ ಸೊಂಗ್ ರ್ತನ ನಡೆಯಲಿದೆ. ಸಂಜೆ 4ಕ್ಕೆ ದಹಿಕಾಲೋತ್ಸವ ಪೂರೈಸಿ, ದೇವರನ್ನು ಅವಭೃತ ಸ್ನಾನಕ್ಕೆ ಕೋಡಿಭಾಗದ ಕಾಳಿನದಿ ಸನ್ನಿಧಿಗೆ ಕರೆದೊಯ್ಯಲಾಗುತ್ತದೆ. ರಾತ್ರಿ 8.30ಕ್ಕೆ ದೇವಾಲಯಕ್ಕೆ ಹಿಂದಿರುಗಿದ ಬಳಿಕ ಮಹಾ ಮಂಗಳಾರತಿ ಹಾಗೂ ಸವಾಕು ಜರುಗಲಿದ್ದು, ನಂತರ ಬಾಡದ ಮಹಾದೇವ ನಾಟ್ಯ ಮಂಡಳಿ ವತಿಯಿಂದ ‘ಕಲಿತ ಕಳ್ಳ’ ಸಾಮಾಜಿಕ ನಾಟಕ ಪ್ರರ್ಶನಗೊಳ್ಳಲಿದೆ.
`ಜಾತ್ರೆಗೆ ದೇಣಿಗೆ ನೀಡುವವರು ಆಡಳಿತ ಕಚೇರಿಯಿಂದ ಅಧಿಕೃತ ಪಾವತಿ ಪಡೆಯಬೇಕು. ದೇವಸ್ಥಾನದ ಹಿಂದುಗಡೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮಹಾದೇವ ವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.