ಬಸ್ ನಿಲ್ದಾಣದ ಶೌಚಾಲಯಕ್ಕೆ ಹೋಗಿದ್ದ ಕಿನ್ನರದ ಪ್ರದೀಪ ಗುನಗಿ ಅವರು ಅಲ್ಲಿಂದ ಕಾಣೆಯಾಗಿದ್ದಾರೆ. ಹೀಗಾಗಿ ಕುಟುಂಬದವರು ಅವರ ಹುಡುಕಾಟ ನಡೆಸಿದ್ದಾರೆ.
ಕಾರವಾರದ ಕಿನ್ನರದ ಗಡಸಾಯಿಯಲ್ಲಿ ಪ್ರದೀಪ ಪೊಕ್ಕಾ ಗುನಗಿ ಅವರು ವಾಸವಾಗಿದ್ದರು. 42 ವರ್ಷದ ಅವರು ಕಳೆದ ಒಂದು ವಾರದಿಂದ ಮಾನಸಿಕವಾಗಿ ಕುಗ್ಗಿದ್ದರು. ಅನಾರೋಗ್ಯದಿಂಲೂ ಅವರು ಬಳಲುತ್ತಿದ್ದರು. ನವೆಂಬರ್ 16ರಂದು ಚಿಕಿತ್ಸೆಗಾಗಿ ಅವರು ಜಿಲ್ಲಾಸ್ಪತ್ರೆಗೆ ಬಂದಿದ್ದರು. ವೈದ್ಯರನ್ನು ಭೇಟಿ ಮಾಡಿ ಔಷಧಿಯನ್ನು ಪಡೆದಿದ್ದರು. ಅದಾದ ನಂತರ ಮನೆಗೆ ಮರಳುತ್ತಿದ್ದು, ಇದಕ್ಕಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದರು.
ಬಸ್ ನಿಲ್ದಾಣದಲ್ಲಿದ್ದ ಅವರು `ಶೌಚಾಲಯಕ್ಕೆ ಹೋಗಿ ಬರುವೆ’ ಎಂದು ಜೊತೆಗಿದ್ದವರ ಬಳಿ ಹೇಳಿಕೊಂಡಿದ್ದರು. ಶೌಚಾಲಯದ ಕಡೆ ಹೋದ ಅವರು ಮತ್ತೆ ಮರಳಿ ಬರಲಿಲ್ಲ. ಅವರು ಎಲ್ಲಿ ಹೋದರು? ಎಂದು ಸಹ ಗೊತ್ತಾಗಲಿಲ್ಲ. ಪ್ರದೀಪ ಗುನಗಿ ಅವರು ಎಣ್ಣೆಗಪ್ಪು ಮೈಬಣ್ಣ, ಉದ್ದನೆಯ ಮುಖ, ಸಾಧಾರಣ ಮೈಕಟ್ಟು, 5.5 ಅಡಿ ಎತ್ತರವಿದ್ದಾರೆ. ಕೊನೆಯದಾಗಿ ತಿಳಿ ನೀಲಿ ಬಣ್ಣದ ಟೀ ಶರ್ಟ್, ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಪ್ರದೀಪ ಗುನಗಿ ಅವರು ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ನೀವು ಅವರನ್ನು ನೋಡಿದರೆ ಇಲ್ಲಿ ಫೋನ್ ಮಾಡಿ: 08382-222336