ಮುಂಡಗೋಡಿನ ಜ್ಞಾನ ಪ್ರಜ್ಞಾ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿನಿ ರಂಜಿತಾ ಹಾವೇರಿ ಅವರು ಅಂತರಾಷ್ಟಿಯ ಕ್ರಿಕೆಟ್ ಸರಣಿಗೆ ಆಯ್ಕೆಯಾಗಿದ್ದು, ಅವರು ಭಾರತೀಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತ ಮತ್ತು ನೇಪಾಳ ನಡುವೆ ನಡೆಯಲಿರುವ ಐದು ಪಂದ್ಯಗಳ ದ್ವಿಪಕ್ಷೀಯ ಅಂಧ ಮಹಿಳೆಯರ ಟಿ20 ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸಲು ರಂಜಿತಾ ಹಾವೇರಿ ಅವರು ಸಿದ್ಧರಾಗಿದ್ದಾರೆ.
ಸಮರ್ಧನಂ ಸಂಸ್ಥೆ ಹಾಗೂ ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ ಸಂಸ್ಥೆ ಜಂಟಿಯಾಗಿ ಅವರನ್ನು ಈ ಪಂದ್ಯಾವಳಿಗೆ ಆಯ್ಕೆ ಮಾಡಿದೆ. ಈ ಸರಣಿಯು ಗುರುಗ್ರಾಮನ ದಿ ಬಾಲ್ ವಾರ್ಕ ಕ್ರಿಕೆಟ್ ಮೈದಾನದಲ್ಲಿ ಡಿಸೆಂಬರ್ 2ರಿಂದ 8ರವರೆಗೆ ಜರುಗಲಿದೆ. ಸರಣಿಯ ಪೂರ್ವಸಿದ್ದತೆಗಾಗಿ ನವೆಂAಬರ್ 16ರಿಂದಲೇ ಅವರಿಗೆ ತರಬೇತಿ ಶುರುವಾಗಿದ್ದು, ಆ ತರಬೇತಿಯಲ್ಲ ರಂಜಿತಾ ಹಾವೇರಿ ಅವರು ಭಾಗವಹಿಸಿದ್ದಾರೆ.
ಭಾರತವನ್ನು ಪ್ರತಿನಿಧಿಸುವ ಈ ತಂಡದಲ್ಲಿ ಕರ್ನಾಟಕದ ಒಟ್ಟು ನಾಲ್ವರು ಪ್ರತಿಭಾವಂತ ಆಟಗಾರ್ತಿಯರಿದ್ದಾರೆ. ಮುಂಡಗೋಡಿನ ಜ್ಞಾನಪ್ರಜ್ಞ ಅಂಧ ಮಕ್ಕಳ ಶಾಲೆಯ ರಂಜಿತಾ ಹಾವೇರಿ, ದೀಪಿಕಾ ಟಿ.ಸಿ., ಸುನೀತಾ ಧೋಂಡವ್ವನವರ ಹಾಗೂ ಜಯಲಕ್ಷ್ಮಿ ಬಿ ಅವರು ತಂಡದಲ್ಲಿ ಪ್ರಮುಖ ಸ್ಥಾನಪಡೆದಿದ್ದಾರೆ. ರಂಜಿತಾ ಹಾವೇರಿ ಅವರ ಸಾಧನೆಗೆ ಜ್ಞಾನಪ್ರಜ್ಞಾ ವಸತಿ ಶಾಲೆಯ ಅಧ್ಯಕ್ಷ ಶಂಕರ್ ವಿ ಆಲದಕಟ್ಟಿ ಅವರು ಸಂತಸವ್ಯಕ್ತಪಡಿಸಿದ್ದಾರೆ.