ಅಟ್ಟಣಗಿ ಮಾಸ್ತಿಹಳ್ಳದ ಬಳಿ ದನ ಕಾಯಲು ಹೋಗಿದ್ದ ರಂಗು ಕೊಕ್ಕರೆ ಅವರಿಗೆ ಆ ಭಾಗದಲ್ಲಿ ಓಡಾಡುವ ಕಾಡಾನೆ ನೀರಿನಲ್ಲಿ ಮುಳುಗಿಸಿದೆ. ನೀರಿನಿಂದ ಮೇಲೆ ಬರಲಾಗದೇ ಅವರು ಅಲ್ಲಿಯೇ ಸಾವನಪ್ಪಿದ್ದಾರೆ.
ಮುಂಡಗೋಡಿನ ಚಳಗೇರಿಯಲ್ಲಿ ರೊಂಗು ದೊಂಡು ಕೊಕ್ಕರೆ ಅವರು ವಾಸವಾಗಿದ್ದರು. 38 ವರ್ಷದ ಅವರು ದನ ಕಾಯುವ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ನವೆಂಬರ್ 4ರಂದು ಅವರು ಎಂದಿನAತೆ ದನಗಳನ್ನು ಮೇವಿಗೆ ಬಿಟ್ಟಿದ್ದರು. ಅಟ್ಟಣಗಿ ಮಾಸ್ತಿಹಳ್ಳ ಭಾಗದಲ್ಲಿ ಅವರು ಸಂಚಾರ ನಡೆಸಿದ್ದರು. ಆದರೆ, ಆ ದಿನ ಸಂಜೆ ಅವರು ಮನೆಗೆ ಮರಳಿರಲಿಲ್ಲ. ಮರುದಿನ ಸಹ ರಂಗು ಕೊಕ್ಕರೆ ಅವರ ಸುಳಿವು ಸಿಕ್ಕಿರಲಿಲ್ಲ.
ನವೆಂಬರ್ 6ರಂದು ರಂಗು ಕೊಕ್ಕರೆ ಅವರು ಅಟ್ಟಣಗಿ ಹತ್ತಿರದ ಮಾಸ್ತಿಹಳ್ಳದಲ್ಲಿ ಶವವಾಗಿದ್ದರು. ಊರಿನ ಅಕ್ಕಪಕ್ಕದಲ್ಲಿ ಕಾಡಾನೆ ಕಾಟ ಜೋರಾಗಿದ್ದು, ಅವೇ ರಂಗು ಕೊಕ್ಕರೆ ಅವರನ್ನು ನೀರಿನಲ್ಲಿ ಮುಳುಗಿಸಿದ ಬಗ್ಗೆ ಅವರ ಅಣ್ಣ ಭಾಗು ಕೊಕ್ಕರೆ ಅವರು ಅನುಮಾನವ್ಯಕ್ತಪಡಿಸಿದರು. ಆನೆ ದಾಳಿ ಮಾಡಿ, ತುಳಿದು ಅವರನ್ನು ಸಾಯಿಸಿದ ಬಗ್ಗೆ ಅವರು ತನಿಖೆ ನಡೆಸುವಂತೆ ಪೊಲೀಸ್ ದೂರು ದಾಖಲಿಸಿದರು. ಹಳ್ಳದಲ್ಲಿ ನೀರು ಕೊಡಿಯಲು ಹೋದಾಗ ಈ ಸಾವು ನಡೆದಿರುವ ಸಾಧ್ಯತೆಯಿರುವ ಬಗ್ಗೆಯೂ ಅವರು ಹೇಳಿದ್ದು, ಸಮಗ್ರ ತನಿಖೆ ನಡೆಸುವಂತೆ ಕೋರಿದರು.