`ಕರ್ನಾಟಕ-ಗೋವಾದ ಗಡಿಭಾಗವಾದ ಕಾರವಾರದಲ್ಲಿ ಕನ್ನಡದ ಉಳಿವಿಗಾಗಿ ಕನ್ನಡ ಸಂಘಟನೆಗಳು ಹೋರಾಟ ನಡೆಸಿದ್ದು, ಜಯ ಕರ್ನಾಟಕ ಜನಪರ ವೇದಿಕೆಯವರ ಕಾರ್ಯ ಶ್ಲಾಘನೀಯ’ ಎಂದು ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪಸರಂಕ್ಷಣಾಧಿಕಾರಿ ಮಂಜುನಾಥ ನಾವಿ ಅವರು ಹೇಳಿದ್ದಾರೆ. ಕಾರವಾರ ಬಸ್ ನಿಲ್ದಾಣದ ಬಳಿ ಜಯ ಕರ್ನಾಟಕ ಜನಪರ ವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. `ಕನ್ನಡಾಂಬೆಯ ಸೇವೆಗಾಗಿ ಎಲ್ಲರೂ ಒಂದಾಗಿ ದುಡಿಯಬೇಕು’ ಎಂದು ಅವರು ಕರೆ ನೀಡಿದ್ದಾರೆ.
`ಸಾಮಾನ್ಯವಾಗಿ ಎಲ್ಲಾ ಗಡಿ ಪ್ರದೇಶದಲ್ಲಿ ಎರಡು ಭಾಷೆಗಳ ಬಳಕೆ ಮಾಡಲಾಗುತ್ತದೆ. ಕಾರವಾರದಲ್ಲೂ ಕನ್ನಡದ ಜೊತೆಗೆ ಕೊಂಕಣಿ, ಹಿಂದಿ, ಮರಾಠಿ ಮಾತನಾಡಲಾಗುತ್ತದೆ. ಕಳೆದ ಹತ್ತು ವರ್ಷದ ಹಿಂದೆ ಕಾರವಾರದಲ್ಲಿ ಕನ್ನಡಕ್ಕೆ ಇಷ್ಟೊಂದು ಪ್ರಾದಾನ್ಯತೆ ಸಿಕ್ಕಿರಲಿಲ್ಲ. ಆದರೆ ಈಗ ಕನ್ನಡ ಪ್ರೀತಿಸುವವರ ಹಾಗೂ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ಕನ್ನಡ ಸಂಘಟನೆಗಳ ಕೊಡುಗೆ ಅಪಾರ’ ಎಂದರು. `ನಾಡು ನುಡಿ ಎಂದು ಬಂದಾಗ ಎಲ್ಲಾ ಕನ್ನಡಿಗರು ಒಂದಾಗಬೇಕು. ಕನ್ನಡ ಅನ್ನುವುದು ಕೇವಲ ಭಾಷೆ ಮಾತ್ರವಲ್ಲ. ಕನ್ನಡ ಭಾವನಾತ್ಮಕ ಸಂಕೇತ. ಹೊರ ರಾಜ್ಯ, ದೇಶದಲ್ಲಿ ಕನ್ನಡ ಮಾತನಾಡುವವರು ಸಿಕ್ಕರೆ ಒಂದೇ ಕುಟುಂಬದವರು ಎನ್ನುವ ಭಾವನೆ ಮೂಡುತ್ತದೆ. ಕನ್ನಡ ಉಳಿಸಿ ಬೆಳೆಸಲು ಜಯಕರ್ನಾಟಕ ಜನಪರ ವೇದಿಕೆಯಂತಹ ಸಂಘಟನೆ ರಾಜ್ಯೋತ್ಸವ ಕಾರ್ಯಕ್ರಮ ನಿರಂತರವಾಗಿ ಮಾಡಲಿ’ ಎಂದು ಹಾರೈಸಿದರು.
ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷ ದಿಲೀಪ್ ಅರ್ಗೇಕರ ಅವರು ಮಾತನಾಡಿ `ಕಳೆದ 17 ವರ್ಷದ ಹಿಂದೆ ಸಂಘಟನೆಯಿAದ ರಾಜ್ಯೋತ್ಸವ ಕಾರ್ಯಕ್ರಮ ಪ್ರಾರಂಭಿಸಿದೆವು. ಅಂದಿನಿoದ ಇಂದಿನವರೆಗೆ ಪ್ರತಿ ರಾಜ್ಯೋತ್ಸವದ ದಿನ ಕಾರ್ಯಕ್ರಮ ಮಾಡುತ್ತಲೇ ಬಂದಿದ್ದೇವೆ. ನಾಡಿನ ನೆಲ, ಜಲ, ನುಡಿಯ ರಕ್ಷಣೆಗೆ ಸದಾ ಹೋರಾಡುತ್ತಿದ್ದೇವೆ. ಕಾರವಾರದಲ್ಲಿ ಕನ್ನಡಕ್ಕೆ ನಮ್ಮ ಮೊದಲ ಆದ್ಯತೆ’ ಎಂದರು. ನುಡಿಜೇನು ಪತ್ರಿಕೆಯ ಮಾಲಕ ಸಂದೀಪ್ ಸಾಗರ್, ಕುಸ್ತಿ ಸಂಘದ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷರ ಸುಭಾಷ್ ಗುನಗಿ. ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ್ ತಾಂಡೇಲ್. ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಕಾರ್ಯಧ್ಯಕ್ಷ ರೋಷನ್ ಹರಿಕಂತ್ರ, ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ಸುದೇಶ್ ನಾಯ್ಕ್ ಅವರು ಕಾರ್ಯಕ್ರಮದಲ್ಲಿದ್ದರು.
ಸಂಘಟನೆಯ ಜಿಲ್ಲಾ ಯುವ ಘಟಕ ಕಾರ್ಯಧ್ಯಕ್ಷ ರಾಹುಲ್ ತಾಂಡೇಲ್, ಜಿಲ್ಲಾ ಉಪಾಧ್ಯಕ್ಷರಾದ ಸುನಿಲ್ ತಾಂಡೇಲ್, ವಿನಾಯಕ ಚಂದ್ರಕಾoತ್ ಹರಿಕಂತ್ರ, ಜಿಲ್ಲಾ ಕಾರ್ಯದರ್ಶಿಯಾದ ರಾಜು ತಾಂಡೇಲ್. ಕೃಷ್ಣ ಹರಿಕಂತ್ರ, ದಿಲೀಪ್ ಉಳ್ವೇಕರ್, ವಿನಯ್ ನಾಯ್ಕ್, ಸಂದೇಶ ಆಚಾರಿ ಅವರ ಜೊತೆ ಸಂಘಟನೆಯ ಪ್ರಮುಖರಾದ ಮಿಥುನ್ ತಾಂಡೇಲ್, ದೀಪಕ್ ತಾಂಡೇಲ್, ಚೇತನ್ ನಾಯ್ಕ್, ನಾಗರಾಜ್ ಉಳ್ವೇಕರ, ವಿನಾಯಕ ಹರಿಕಂತ್ರ, ಶ್ರೀಕಂಠ ಹರಿಕಂತ್ರ, ರವಿಕಿರಣ್ ಹರಿಕಂತ್ರ, ಸಂತೋಷ್ ದುರ್ಗೆಕರ್, ಶಿವರಾಜ್ ಚಂಡೆಕರ ಅವರು ಇದ್ದರು.