ಕಳೆದ 20 ವರ್ಷಗಳಿಂದ ಸಹಕಾರ ಮತ್ತು ಸುಸ್ಥಿರ ಜೀವನೋಪಾಯ ಚಟುವಟಿಕೆ ನಡೆಸುತ್ತಿರುವ ಕಾರಣ ಸ್ಕೊಡ್ವೆಸ್ ಸಂಸ್ಥೆಗೆ `ರೇನ್ಬೋ ಆಕ್ಷನ್ ನೆಟ್ವರ್ಕ್ ಮತ್ತು ಸಿವಿಲ್ ಕ್ರಾಫ್ಟ್ ಸಂಸ್ಥೆ’ಯೂ ಎಸ್.ಜಿ.ಡಿ. ಸೋಶಿಯಲ್ ಇಂಪಾಕ್ಟ್ ಅವಾರ್ಡ್-2026ನ್ನು ನೀಡಿ ಗೌರವಿಸಿದೆ. ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಹಾಗೂ ಕಾರ್ಯದರ್ಶಿ ಸರಸ್ವತಿ ಎನ್ ರವಿ ಅವರು ಚೆನೈಗೆ ತೆರಳಿ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.
ತಮಿಳುನಾಡಿನ ಚೆನ್ನೆöÊನ ಪ್ಯಾಟ್ರಿಶಿಯನ್ ಮಹಾವಿದ್ಯಾಲಯದ ಸಭಾಭವನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಹಕಾರಿ ತತ್ವಗಳನ್ನು ಅಳವಡಿಸಿಕೊಂಡು ಸಾವಿರಾರು ಗ್ರಾಮೀಣ ಬುಡಕಟ್ಟು ಮಹಿಳೆಯರು ಮತ್ತು ರೈತರ ಆರ್ಥಿಕ ಸಬಲತೆಗಾಗಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿದ ಕಾರಣ ಈ ಪ್ರಶಸ್ತಿ ಸಿಕ್ಕಿದೆ. ಸ್ಕೋಡ್ವೆಸ್ ಸಂಸ್ಥೆ ದಕ್ಷಿಣ ಭಾರತದ 5 ರಾಜ್ಯಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು, ಎಲ್ಲಾ ಯೋಜನೆಗಳನ್ನೂ ಸ್ಥಳೀಯ ಅವಶ್ಯಕತೆಗನುಗುಣವಾಗಿ ಅನುಷ್ಠಾನಗೊಳಿಸುವ ವಿಧಾನವನ್ನು ಸಭೆಯಲ್ಲಿ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.
ಸಹಕಾರ ಮತ್ತು ಸಾಮಾಜಿಕ ತತ್ವಗಳನ್ನು ಒಟ್ಟಿಗೆ ಅನುಷ್ಟಾನಗೊಳಿಸುವ ದೇಶದ ಕೆಲವೇ ಸಂಸ್ಥೆಗಳಲ್ಲಿ ಸ್ಕೊಡ್ವೆಸ್ ಸಂಸ್ಥೆಯೂ ಒಂದು ಎಂಬ ಅಭಿಪ್ರಾಯ ಈ ಸಭೆಯಲ್ಲಿ ಕೇಳಿಸಿದೆ. ಕೆನರಾ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ, ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ್ ಹೆಬ್ಬಾರ್, ಕುಮಟಾ ಶಾಸಕ ದಿನಕರ ಶೆಟ್ಟಿ, ಉದ್ಯಮಿಗಳಾದ ಸೂರಜ್ ನಾಯ್ಕ ಸೋನಿ, ಅನಂತಮೂರ್ತಿ ಹೆಗಡೆ, ಉಪೇಂದ್ರ ಪೈ ಅವರ ಜೊತೆ ಪ್ರಮುಖರಾದ ಹಿ.ಚಿ. ಬೋರಲಿಂಗಯ್ಯ, ಕುಮಾರ ಕೂರ್ಸೆ, ಕೆ ಎನ್ ಹೊಸಮನಿ, ಅಡ್ವೊಕೇಟ್ ದಯಾನಂದ ಅಗಾಸೆ, ಪ್ರತಿಭಾ ಭಟ್ ಸೇರಿ ಅನೇಕರು ಸ್ಕೋಡ್ವೆಸ್ ಸಾಧನೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.