ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಮೂವರು ವಿದ್ಯಾರ್ಥಿಗಳು ಭಾರತೀಯ ಸಶಸ್ತ್ರ ಪಡೆಗಳ ಅಗ್ನಿವೀರ ಯೋಜನೆ ಅಡಿಯಲ್ಲಿ ಸೈನಿಕರಾಗಿ ಆಯ್ಕೆಯಾಗಿದ್ದಾರೆ. ಇರೇಶ್ ಎಸ್ ಕುರಿ, ಮಂಜುನಾಥ ಎಲ್ ಬಳ್ಳಾರಿ ಹಾಗೂ ವಿಘ್ನೇಶ್ ಗೌಡ ಅವರು ಅಗ್ನಿವೀರರಾಗಿ ಹೊರ ಹೊಮ್ಮಿದ್ದಾರೆ.
ಇರೇಶ್ ಎಸ್. ಕುರಿ ಹಾಗೂ ಮಂಜುನಾಥ ಎಲ್ ಬಳ್ಳಾರಿ ಅವರು ಅಂತಿಮ ವಷÀðದ ಬಿ ಕಾಂ ವಿದ್ಯಾರ್ಥಿಗಳಾಗಿದ್ದಾರೆ. ವಿಘ್ನೇಶ್ ಗೌಡ ಅವರು 4ನೇ ಸೆಮಿಸ್ಟರ್ ಬಿಬಿಎ ವಿದ್ಯಾರ್ಥಿಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆ ಕುರಿತು ಕಾಲೇಜಿನ ಪ್ರಾಂಶುಪಾಲೆ ಗೀತಾ ವಾಲೀಕರ್ ಅವರು ಮಾಹಿತಿ ನೀಡಿದ್ದಾರೆ. `ನಮ್ಮ ವಿದ್ಯಾರ್ಥಿಗಳು ರಾಷ್ಟç ರಕ್ಷಣೆಯಂತಹ ಮಹತ್ತರ ಕ್ಷೇತ್ರದಲ್ಲಿ ಅವಕಾಶಪಡೆದುಕೊಂಡಿರುವುದು ಹೆಮ್ಮೆಯ ವಿಷÀಯ’ ಎಂದವರು ಸಂತಸದಿAದ ಹೇಳಿದ್ದಾರೆ.
`ವಿದ್ಯಾರ್ಥಿಗಳ ಈ ಸಾಧನೆಯು ಅವರ ಕಠಿಣ ಪರಿಶ್ರಮ, ಶಿಸ್ತು ಹಾಗೂ ದೇಶ ಸೇವೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇವರ ಸಾಧನೆಯು ಇತರ ವಿದ್ಯಾರ್ಥಿಗಳಿಗೆ ಸಹ ಸ್ಫೂರ್ತಿದಾಯಕ’ ಎಂದು ಗೀತಾ ವಾಲೀಕರ್ ಅವರು ಹೇಳಿದ್ದಾರೆ. ಮಹಾವಿದ್ಯಾಲಯದ, ಎನ್ ಸಿ ಸಿ ಅಧಿಕಾರಿಗಳು, ವಿಭಾಗ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿ ಆ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದಾರೆ.