ಕದಿಯುವುದಕ್ಕಾಗಿಯೇ ಬೆಂಗಳೂರಿನಿoದ ಶಿರಸಿಗೆ ಬರುತ್ತಿದ್ದ ಜ್ಯೋತಿ ಎಂಬಾತರನ್ನು ಪೊಲೀಸರು ಹಿಡಿದಿದ್ದಾರೆ. ಗ್ಯಾರಂಟಿ ಯೋಜನೆಯ ಉಚಿತ ಬಸ್ಸಿನಲ್ಲಿ ಬಂದು, ಅದೇ ಯೋಜನೆಯ ಫಲಾನುಭವಿಗಳು ಧರಿಸಿದ್ದ ಚಿನ್ನ ಎಗರಿಸುತ್ತಿದ್ದ ಜ್ಯೋತಿ ಇದೀಗ ಜೈಲು ಸೇರಿದ್ದಾರೆ.
ಹೊನ್ನಾವರ ಇಡಗುಂಜಿ ಬಳಕೂರಿನ ಹಾಮಾಕ್ಕಿ ನಿವಾಸಿ ಮಾದೇವಿ ರಾಮಚಂದ್ರ ನಾಯ್ಕ ಅವರು ಮೇ 19ರಂದು ಶಿರಸಿಗೆ ಬಂದಿದ್ದರು. ಆ ದಿನ ಮಧ್ಯಾಹ್ನ 2.15ಕ್ಕೆ ಚಂದ್ರಗುತ್ತಿ-ಹರೀಶಿ ಮಾರ್ಗದ ಬಸ್ ಬಂದಿದ್ದು, ಆ ಬಸ್ಸಿನ ತುಂಬ ಜನರಿದ್ದರು. ಜೊತೆಗೆ, ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಜನರು ಆ ಬಸ್ಸು ಹತ್ತಲು ಒಮ್ಮೆಲೆ ಬಂದಿದ್ದರಿAದ ಅಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಮಾದೇವಿ ನಾಯ್ಕ ಅವರ ಜೊತೆ ಅವರ ಪುತ್ರ ದಿಗಂತ, ಅತ್ತೆ ಪಾರ್ವತಿ ಹಾಗೂ ಇನ್ನಿತರ ಸಂಬoಧಿಕರು ಬಸ್ಸಿನ ಬಳಿ ಓಡಿ ಸೀಟು ಹಿಡಿಯುವ ಪ್ರಯತ್ನ ಮಾಡುವ ವೇಳೆ ಅವರ ಬಳಿಯಿದ್ದ ಚಿನ್ನ ಕಳ್ಳತನವಾಗಿತ್ತು.
ಜೂನ್ 3ರಂದು ಸಹ ಮತ್ತೊಬ್ಬರ ಮಹಿಳೆಯ ಚಿನ್ನ ಕಾಣೆಯಾಗಿತ್ತು. ಈ ಎರಡು ಕೇಸು ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿದರು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಬೆಂಗಳೂರಿನ ಜ್ಯೋತಿ (ಸಂಜನಾ) ವೆಂಕಟೇಶ್ ಪುಸುಪಲೇಟ್ (32) ಅವರ ಮೇಲೆ ಅನುಮಾನ ಮೂಡಿತು. ಈ ವೇಳೆಗೆ ಕಾರವಾರ ಟೆಕ್ನಿಕಲ್ ಸೆಲ್’ನ ಉದಯ ಗುನಗಾ, ಬಬನ ಕದಂ ಹಾಗೂ ಮಹಾಲಿಂಗ ಸಾವಳಗಿ ಅವರು ಜ್ಯೋತಿ ಅವರ ಜಾತಕ ತೆರೆದಿಟ್ಟಿದ್ದರು.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ, ಪೊಲೀಸ್ ನಿರೀಕ್ಷಕ ಸಂಪತ್ ಈ ಸಿ ಅವರ ಜೊತೆ ಪಿಸೈ ನರಸಿವಂಹಲು, ಕೋಟೇಶ್ ನಾಗರವಳ್ಳಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪುರ, ಸದ್ದಾಂ ಹುಸೇನ್, ಚನ್ನಬಸಪ್ಪ ಕೆ, ರಾಜು ಎಂ, ತುಕಾರಾಮ ಬಣಗಾರ, ಸುನೀಲ, ಪ್ರಶಾಂತ, ಶಂಕರಮ್ಮ ಅವರು ಆರೋಪಿಯನ್ನು ಬಂಧಿಸಿದರು.