ಮಾoಸ ಮಾರಾಟಕ್ಕಾಗಿ ಮುಗ್ದ ಹಸುಗಳನ್ನು ಕೊಲ್ಲುತ್ತಿದ್ದ ಭಟ್ಕಳದ ಇಬ್ರಾಯಿಂ ಹವ್ವಾ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಮುಂದಿನ ಆರು ತಿಂಗಳ ಕಾಲ ಇಬ್ರಾಯಿಂ ಹವ್ವಾ ಅವರು ಈ ಜಿಲ್ಲೆಗೆ ಕಾಲಿರಿಸುವ ಹಾಗಿಲ್ಲ.
ಭಟ್ಕಳ ಹನಿಪಾಬಾದ್ ಮುನರಪಳ್ಳಿಯಲ್ಲಿ ಇಬ್ರಾಯಿಂ ಮಹಮದ್ ಹುಸೇನ್ ಹವ್ವಾ ಅವರು ವಾಸವಾಗಿದ್ದರು. ಕಾನೂನುಬಾಹಿರವಾಗಿ ಗೋ ಸಾಗಾಟ, ಮಾಂಸಕ್ಕಾಗಿ ಗೋಹತ್ಯೆ ಮಾಡುವುದನ್ನು ಅವರು ರೂಢಿಸಿಕೊಂಡಿದ್ದರು. 2012ರಿಂದ ಗೋವುಗಳನ್ನು ವಧೆ ಮಾಡುವ ಕಾಯಕ ಮಾಡಿಕೊಂಡಿದ್ದರು. ದಷ್ಟಪುಷ್ಟ ಗೋವುಗಳನ್ನು ಸಹ ಕಿಂಚಿತ್ತು ಕನಿಕರವಿಲ್ಲದೇ ಕೊಲ್ಲುತ್ತಿದ್ದರು. ಅಕ್ರಮ ಗೋ ಹತ್ಯೆ ಪ್ರಕರಣದ ಅಡಿ ಇಬ್ರಾಯಿಂ ಹವ್ವಾ ಅವರು 8 ಬಾರಿ ಸಿಕ್ಕಿ ಬಿದ್ದಿದ್ದರು. ಮತ್ತೊಂದು ಹೊಡೆದಾಟ ಪ್ರಕರಣದಲ್ಲಿಯೂ ಅವರು ಆರೋಪಿಯಾಗಿದ್ದರು.
ಕಾನೂನುಬಾಹಿರ ಕೆಲಸ ನಿಲ್ಲಿಸುವಂತೆ ಪೊಲೀಸರು ಸಾಕಷ್ಟು ಸಲ ತಿಳುವಳಿಕೆ ನೀಡಿದ್ದರು. ಆದರೂ, ಇಬ್ರಾಯಿಂ ಹವ್ವಾ ಅವರ ವರ್ತನೆಯಲ್ಲಿ ಏನೂ ಬದಲಾಗಿರಲಿಲ್ಲ. ಜೈಲಿಗೆ ಹೋಗಿ ಬಂದರೂ ಸಹ ಇಬ್ರಾಹಿಂ ಹವ್ವಾ ತಮ್ಮ ನಡುವಳಿಕೆ ಬದಲಿಸಿಕೊಂಡಿರಲಿಲ್ಲ. ಹೀಗಾಗಿ ಪೊಲೀಸರು ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾದರು. ಪೊಲೀಸ್ ಅಧೀಕ್ಷಕರಿಗೆ ವರದಿ ಸಲ್ಲಿಸಿ ಗಡಿಪಾರು ಆದೇಶಕ್ಕೆ ಶಿಫಾರಸ್ಸು ಮಾಡಿದರು. ಈ ಎಲ್ಲಾ ಹಿನ್ನಲೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಗೋ ಹಂತರ ಇಬ್ರಾಯಿಂ ಹವ್ವಾ ಅವರನ್ನು ಜಿಲ್ಲೆಯಿಂದ ಓಡಿಸಿದರು. ಭಟ್ಕಳ ಪೊಲೀಸರು ಅವರನ್ನು ಕೊಪ್ಪಳಕ್ಕೆ ಕರೆದೊಯ್ದು ಬಿಟ್ಟರು.